ಸಮಸ್ಯೆಯಿರುವುದು EVM ಗಳಲ್ಲಿ ಅಲ್ಲ, ಜನರ ಮೆದುಳಿನಲ್ಲಿ: ಉವೈಸಿ

Prasthutha|

ಲಕ್ನೋ: ಭಾರೀ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಚುನಾವಣೆ ಕುರಿತು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀದ್‌ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಹಲವು ರಾಜಕೀಯ ಪಕ್ಷಗಳು ಇವಿಎಂ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ತಮ್ಮ ಸೋಲನ್ನು ಮರೆಮಾಚಲು ಪ್ರಯತ್ನಿಸುತ್ತಿವೆ. ಆದರೆ ಇದು ಇವಿಎಂ ಸಮಸ್ಯೆಯಲ್ಲ, ಜನರ ತಲೆಯಲ್ಲಿರುವ ಚಿಪ್ಪಿನ ಸಮಸ್ಯೆ. ಬಿಜೆಪಿ ಯಶಸ್ವಿಯಾಗಿರುವುದು 80-20. ನಾವು ನಾಳೆಯಿಂದಲೇ ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತೇವೆ. ಮುಂದಿನ ಬಾರಿ ಉತ್ತಮ ಸಾಧನೆ ಮಾಡುತ್ತೇವೆ ಎಂಬ ನಂಬಿಕೆ ಇದೆ ಎಂದು ಓವೈಸಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಅಲ್ಪಸಂಖ್ಯಾತರನ್ನು ಕೇವಲ ವೋಟ್‌ ಬ್ಯಾಂಕ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಲಖಿಂಪುರ್‌ ಖೇರಿಯಲ್ಲೂ ಬಿಜೆಪಿ ಗೆದ್ದಿದೆ. ಅದಕ್ಕಾಗಿಯೇ 80-20 ಗೆಲುವು ಎಂದು ಹೇಳುತ್ತಿದ್ದೇನೆ. ಈ 80-20 ಪರಿಸ್ಥಿತಿಯು ವರ್ಷಗಳವರೆಗೆ ಇರುತ್ತದೆ. ಅದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಉತ್ಸಾಹ ಇನ್ನೂ ಹೆಚ್ಚಿದೆ ಎಂದು ಹೇಳಿದ್ದಾರೆ.

Join Whatsapp