ವಿಶ್ವಾಸ ಮತ ಕಳೆದುಕೊಂಡ ನೇಪಾಳ ಪ್ರಧಾನಿ ಪ್ರಚಂಡ

Prasthutha|

ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಶುಕ್ರವಾರ ಸಂಸತ್ತಿನಲ್ಲಿ ವಿಶ್ವಾಸ ಮತ ಕಳೆದುಕೊಂಡಿದ್ದಾರೆ. ಅವರು ಅಧಿಕಾರದಿಂದ ಇಳಿಯುವುದು ಪಕ್ಕಾ ಆಗಿದೆ. ಅವರ ಪ್ರತಿಸ್ಪರ್ಧಿ ಕೆಪಿ ಶರ್ಮಾ ಒಲಿ ಮುಂದಿನ ಪ್ರಧಾನಿಯಾಗಿ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಾಗಿದೆ.

- Advertisement -

ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (CPN-UML) ಪ್ರಚಂಡ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆಗೆದುಕೊಂಡ ನಂತರ ಪ್ರಚಂಡ ವಿಶ್ವಾಸ ಮತಕ್ಕೆ ಮುಂದಾಗಬೇಕಾಯಿತು.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ವಿಶ್ವಾಸ ಮತವನ್ನ ಪಡೆಯಲು 138 ಮತಗಳು ಬೇಕಾಗಿದೆ. ಆದರೆ ಪ್ರಚಂಡ ಕೇವಲ 63 ಮತಗಳನ್ನು ಮಾತ್ರ ಪಡೆದಿದ್ದಾರೆ. ವಿಶ್ವಾಸ ನಿರ್ಣಯದ ವಿರುದ್ಧ 194 ಮತಗಳು ಬಂದವು. ಈ ಮೂಲಕ ಅವರ ಸರಕಾರ ವಿಶ್ವಾಸ ಮತ ಕಳೆದುಕೊಂಡಿದೆ.



Join Whatsapp