ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ ಪ್ರತಿ ಸಿಲಿಂಡರ್ ದರವನ್ನು ಮಂಗಳವಾರ 50 ರೂ. ಹೆಚ್ಚಿಸಲಾಗಿದೆ.
- Advertisement -
ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ 949 ರೂ. ಗೆ ತಲುಪಿದೆ.
ಕಳೆದ ಅಕ್ಟೋಬರ್ನಿಂದೀಚೆಗೆ ಇದು ಮೊದಲ ಬಾರಿಗೆ ಏರಿಕೆಯಾಗಿದೆ. ಕಚ್ಛಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ಕಳೆದ ಕೆಲ ತಿಂಗಳಿನಿಂದ ಎಲ್ ಪಿಜಿ ದರ ಸ್ಥಿರವಾಗಿ ಉಳಿದಿತ್ತು.