ವಾಣಿಜ್ಯ ಸಿಲಿಂಡರ್ ಬೆಲೆ 250 ರೂ. ಹೆಚ್ಚಳ !

Prasthutha|

ದೆಹಲಿ: ತಿಂಗಳ ಮೊದಲ ದಿನವಾದ ಇಂದು ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ.

- Advertisement -

ಇಂದಿನಿಂದ 19 ಕೆಜಿಯ ವಾಣಿಜ್ಯ  ಎಲ್‌ ಪಿಜಿ ಸಿಲಿಂಡರ್ ಬೆಲೆ 250 ರೂ. ಏರಿಕೆ ಮಾಡಲಾಗಿದೆ.

ಅದರಂತೆ 19 ಕೆಜಿಯ LPG ಸಿಲಿಂಡರ್ ಬೆಲೆ 2,253 ರೂ.ಗೆ ಹೆಚ್ಚಳವಾಗಿದೆ. 2 ತಿಂಗಳಲ್ಲಿ 19 ಕೆಜಿ LPG ಸಿಲಿಂಡರ್ ಬೆಲೆ ಒಟ್ಟು 346 ರೂಪಾಯಿ ಏರಿಕೆಯಾಗಿದೆ.

- Advertisement -

ಕಳೆದ ಎರಡು ತಿಂಗಳಲ್ಲಿ 19 ಕೆಜಿ ಎಲ್‍ಪಿಜಿ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್ ಗೆ 346 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಇದಕ್ಕೂ ಮುನ್ನ ಮಾರ್ಚ್ 1ರಂದು 19 ಕೆ.ಜಿ. ವಾಣಿಜ್ಯ ಸಿಲಿಂಡರ್ ದರವನ್ನು 105 ರೂಪಾಯಿ ಹೆಚ್ಚಿಸಲಾಗಿದ್ದು, ಬಳಿಕ ಮಾರ್ಚ್ 22ರಂದು 9 ರೂಪಾಯಿ ಇಳಿಸಲಾಗಿತ್ತು.




Join Whatsapp