ಅರಾಜಕತೆ ಸೃಷ್ಟಿಸುವ ವಿಚ್ಛಿದ್ರ ಶಕ್ತಿಗಳನ್ನು ಪೊಲೀಸರು ಮಟ್ಟ ಹಾಕಬೇಕು : ರಾಜ್ಯ ಉಲಮಾ ಒಕ್ಕೂಟ ಆಗ್ರಹ

Prasthutha|


ಮಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ದ.ಕ ಜಿಲ್ಲೆಯ ಅಲ್ಲಲ್ಲಿ ಅಲ್ಪ ಸಂಖ್ಯಾತರನ್ನು ಗುರಿಯಾಗಿಟ್ಟು ಕೊಂಡು ಕೊಲೆಯತ್ನ, ತ್ರಿಶೂಲ ದಾಳಿ ಮರುಕಳಿಸುತ್ತಿದ್ದು ಈಗ ಮತ್ತೆ ಉಪ್ಪಿನಂಡಿ ಸಮೀಪ ಅಂಡತಡ್ಕದ ಐವರು ಮುಗ್ದ ಯುವಕರ ಮೇಲೆ ತಲವಾರು ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಅರಾಜಕತೆ ಸೃಷ್ಟಿಸುವ ವಿಛಿದ್ರ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರು ಮುಂದಾಗ ಬೇಕು ಎಂದು ಕರ್ನಾಟಕ ರಾಜ್ಯ ಉಲಮಾ ಒಕ್ಕೂಟ ಆಗ್ರಹಿಸಿದೆ.

- Advertisement -


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟ, ಮುಖ್ಯ ಮಂತ್ರಿಯ ಇತ್ತೀಚಿನ ಹೇಳಿಕೆ ಪ್ರಕಾರ ಇದಕ್ಕೆ ಇನ್ನೊಂದು ಸಮಾಜ ರಿಯಾಕ್ಷನ್ ಗೆ ಇಳಿದರೆ ಇಲ್ಲಿ ಅರಾಜಕತೆ ಉಂಟಾಗುವುದು ಖಚಿತ. ಈಗಾಗಲೇ ಕೋಮು ಸೂಕ್ಷ್ಮ ಜಿಲ್ಲೆ ಎಂಬ ಕುಖ್ಯಾತಿಗೆ ಒಳಗಾದ ಜಿಲ್ಲೆಯ ಹೆಸರನ್ನು ಮತ್ತಷ್ಟು ಕೆಡಿಸಲು ಹೊರಟ ಕೋಮು, ಫ್ಯಾಶಿಸ್ಟ್ ಶಕ್ತಿಗಳನ್ನು ಮಟ್ಟಹಾಕುವುದು ಕಾನೂನು ಪಾಲಕರ ಕರ್ತವ್ಯವಾಗಿದೆ ಎಂದು ತಿಳಿಸಿದೆ.


ಸಂಘಪರಿವಾರದ ಕಿಡಿಗೇಡಿಗಳು ಮುಸ್ಲಿಮರ ಮೇಲೆ ನಿರಂತರ ದಾಳಿ ಮಾಡುವ ಮೂಲಕ ದೇಶದ ಮಾನವನ್ನು ಹರಾಜು ಹಾಕುತ್ತಿದ್ದು ಇವರ ವಿರುದ್ದ ಎಲ್ಲಾ ದೇಶ ಪ್ರೇಮಿ ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ದೇಶದ ಅಭಿವೃದ್ದಿಗೆ ಶಾಂತಿ, ಬಾತೃತ್ವದ ವಾತಾವರಣ ನೆಲೆಸುವುದು ಮುಖ್ಯವಾಗಿದೆ. ಇಂತಹ ಕೊಲೆ ಹಲ್ಲೆಗಳು ದೇಶದ ಬಗ್ಗೆ ಕಾಳಜಿ ಇಲ್ಲದ ಕೋಮು ಶಕ್ತಿಗಳು ದೇಶದ ಪ್ರಜೆಗಳ ಮಧ್ಯೆ ಧರ್ಮದ ಆಧಾರದಲ್ಲಿ ದ್ರುವೀಕರಿಸಿ ಅಧಿಕಾರದ ಸವಿಯನ್ನು ಶಾಶ್ವತವಾಗಿ ಉನ್ನಲು ರೂಪಿಸುವ ಷಡ್ಯಂತ್ರವಾಗಿದ್ದು ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿ ಕೊಳ್ಳಬೇಕಾಗಿದೆ ಎಂದು ರಾಜ್ಯ ಉಲಮಾ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.



Join Whatsapp