ಇಂಜಿನ್‌ನಲ್ಲಿ ತಾಂತ್ರಿಕ ದೋಷ, ವಿಮಾನವನ್ನು ಜಮೀನಿನಲ್ಲಿ ಲ್ಯಾಂಡ್​ ಮಾಡಿದ ಪೈಲೆಟ್!

Prasthutha|

ಕಲಬುರಗಿ: ತಾಂತ್ರಿಕ ದೋಷದಿಂದ ತರಬೇತಿ ನಿರತ ವಿಮಾನ ತುರ್ತು ಭೂಸ್ಪರ್ಶವಾಗಿದೆ. ವಿಮಾನ ಟೇಕಾಫ್​ ಆದ ನಂತರ ಇಂಜಿನ್​ನಲ್ಲಿ ತಾಂತ್ರಿಕ ಸಮಸ್ಯೆಯಾಗಿರುವುದರಿಂದ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಪೇಟ್ ಸೀರೂರು ಗ್ರಾಮದ ಬಳಿ ಭೂಸ್ಪರ್ಶವಾಗಿದೆ.

- Advertisement -

ಕಲಬುರಗಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ 15 ಕಿ.ಮೀ ಸಂಚರಿಸಿದೆ. ಆದ್ರೆ, ದಿಢೀರ್ ವಿಮಾನದ ಇಂಜಿನ್‌ನಲ್ಲಿ ಟೆಕ್ನಿಕಲ್ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಕೂಡಲೇ ಎಚ್ಚೆತ್ತ ಪೈಲೆಟ್, ಸೀರೂರ್ ಗ್ರಾಮದ ಜಮೀನಿನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ಅದೃಷ್ಟವಶಾತ್​​ ಯಾವುದೇ ಅನಾಹುತವಾಗಿಲ್ಲ. ವಿಮಾನದಲ್ಲಿದ್ದ ಪೈಲಟ್ ಹಾಗೂ ಟ್ರೈನಿ ಪೈಲೇಟ್ ಸೇಫ್ ಆಗಿದ್ದಾರೆ.

Join Whatsapp