ಕಾಲುವೆಯಲ್ಲಿ ನೀರುಪಾಲಾದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

Prasthutha|

ಬೆಂಗಳೂರು: ತುಮಕೂರು ನಗರದಲ್ಲಿ ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಯ ಕಾರಣದಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಅಮ್ಜದ್ ಖಾನ್ (42) ಎಂಬುವರ ಶವ ಪತ್ತೆಯಾಗಿದ್ದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರಗ ಜ್ಞಾನೇಂದ್ರ ಸೋಮವಾರ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಐದು ಲಕ್ಷ ರೂಪಾಯಿಗಳ ಪರಿಹಾರ ನಿಧಿ ಬಿಡುಗಡೆ ಮಾಡಲು ನಿರ್ದೇಶಿಸಿದ್ದಾರೆ.

- Advertisement -

 ರಾಜಕಾಲುವೆಗೆ ಮೂರು ದಿನಗಳ ಹಿಂದೆ ಬಿದ್ದ ಭಾರಿ ಮಳೆಯ ಹಿನ್ನೆಲೆಯಲ್ಲಿ ರಾಜಕಾಲುವೆಯ ಬಳಿ ನಿಂತಿದ್ದ ಖಾನ್, ಆಕಸ್ಮಿಕವಾಗಿ ಕೊಚ್ಚಿಕೊಂಡು ಹೋದ ಪ್ರದೇಶಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಸ್ಥಳೀಯ ಶಾಸಕ ಜ್ಯೋತಿ ಗಣೇಶ್ ಭೇಟಿ ನೀಡಿ ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿದ್ದರು.

ಮೂರು ದಿನಗಳ ಕಾಲ ಸತತ ಪ್ರಯತ್ನದ ನಂತರ,ಮೃತ ದುರ್ದೈವಿಯ ದೇಹ ಪತ್ತೆಮಾಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದ ರಾಜ್ಯ,ರಾಷ್ಟ್ರೀಯ ವಿಪತ್ತು ದಳ, ಪೊಲೀಸ್ ಮತ್ತು ಅಗ್ನಶಾಮಕದಳದ ಸಿಬ್ಬಂದಿಗಳಿಗೆ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -

 ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥ ರಾಹುಲ್ ಕುಮಾರ್ ಹಾಗೂ ಇತರರಿಗೂ ಸಚಿವರು ಧನ್ಯವಾದ ತಿಳಿಸಿದ್ದಾರೆ.

ರಾಜ್ಯ ವಿಪತ್ತು ಪರಿಹಾರ ಪಡೆಯ ಸುಮಾರು 20 ಮಂದಿ ಸಿಬ್ಬಂದಿಗಳು,  ನೀರಿನಲ್ಲಿ  ಕೊಚ್ಚಿಕೊಂಡು ಹೋದ ವ್ಯಕ್ತಿಯ ಹುಡುಕಾಟ ದಲ್ಲಿ, ನಿರತರಾಗಿದ್ದರು.



Join Whatsapp