ತಾಪಮಾನ ತಡೆಗಟ್ಟಲು ಕ್ರಮಕೈಗೊಳ್ಳದಿದ್ದರೆ ಮುಂದಿನ ಹಾದಿ ಸಂಕಷ್ಟಮಯ: ಐಪಿಸಿಸಿ ವರದಿ

Prasthutha|

ವಾಷಿಂಗ್ಟನ್: ಕೈಗಾರಿಕಾ ವಲಯದಾಚೆ ಭೂಬಿಸಿಯನ್ನು 1.5-2 ಡಿಗ್ರಿ ಸೆಲ್ಸಿಯಸ್ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಜಗತ್ತು ಈಗ ತೀವ್ರವಾಗಿ ತೊಡಗಿಕೊಳ್ಳಬೇಕು ಎಂದು ಐಪಿಸಿಸಿ 6ನೇ ಅಂದಾಜು ವರದಿಯಲ್ಲಿ ಹೇಳಲಾಗಿದೆ. ತುಂಬ ಕಷ್ಟದ ಹಾದಿಯಾದರೂ ದಾಟಲಾಗದ್ದೇನಲ್ಲ.

- Advertisement -

ಮುಂದಿನ 5ರಿಂದ 10 ವರುಷದೊಳಗೆ ಭೂಮಿಯ ವಾತಾವರಣವನ್ನು ಕಾರ್ಬನ್ ಮುಕ್ತವಾಗಿ ಮಾಡಬೇಕಾಗಿದೆ. ಅದು ಆಗದಿದ್ದಲ್ಲಿ ಭೂಬಿಸಿ ತಡೆಯುವಲ್ಲಿ ಪುಟ್ಟ ಆಶಾ ಭಾವನೆಯನ್ನಷ್ಟೆ ಉಳಿಸಿಕೊಳ್ಳಬಹುದು. 3ನೇ ಮತ್ತು ಅಂತಿಮ ಐಪಿಸಿಸಿ ವರದಿಯಲ್ಲಿ ವರುಷಗಳ ಲೆಕ್ಕ ಹಾಕಬೇಡಿ, ಈಗಲೆ ಕೆಲಸ ಆಗಬೇಕು ಎಂದು ಹೇಳಲಾಗಿದೆ.

2025ಕ್ಕೆ ಇನ್ನು ಮೂರು ವರುಷ ಮಾತ್ರ ಇದೆ, ಹಸಿರು ಮನೆ ಅನಿಲ ಉಚ್ಚ ಮಟ್ಟ ಮುಟ್ಟುತ್ತದೆ ಎಂದು ಲೆಕ್ಕ ಹಾಕಲಾಗಿದೆ. 2030ರೊಳಗೆ ಏರಿಕೆಯಾಗಿರುವ ಭೂಬಿಸಿಯನ್ನು 43%ದಷ್ಟಾದರೂ ಕಡಿಮೆ ಮಾಡಬೇಕು ಎನ್ನುವುದು ಲೆಕ್ಕಾಚಾರ.  ಆದರೆ ಕಾರ್ಬನ್ ಹೊರ ಸೂಸುವಿಕೆ ಜಗತ್ತಿನಲ್ಲಿ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಆದ್ದರಿಂದು ಇದೊಂದು ಕಠಿಣ ಕೆಲಸವಾಗಿದೆ. 1.5 ಡಿಗ್ರಿ ಸೆಲ್ಸಿಯಸ್ಸು ಇಳಿಸಲೇಬೇಕು.

- Advertisement -

ಕೈಗಾರಿಕಾ ಮುಕ್ತ ಕಾಲಕ್ಕಿಂತ ಈಗಾಗಲೇ 1.1 ಡಿಗ್ರಿ ಸೆಲ್ಸಿಯೆಸ್ ಭೂಬಿಸಿ ಅಧಿಕವಾಗಿದೆ. ಈಗಿನ ಗುರಿ 2018ರಲ್ಲಿ ಇದ್ದುದಕ್ಕಿಂತ ಕಡಿಮೆ. ಬದಲಿ ಇಂಧನಗಳ ಮೂಲಕ ಬಿಸಿ ಮಟ್ಟ ಇಳಿಸುವ ಕೆಲಸ ಜೋರಾಗಿಯೇ ಸಾಗಿದೆ. ಆದರೆ ಕೈಗಾರಿಕಾ, ವಾಹನಗಳ ಕಾರ್ಬನ್ ವಾತಾವರಣ ಸೇರುವಿಕೆಯನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.  ಹವಾಮಾನ ಬದಲಾವಣೆ ಇಂದಿನ ದೊಡ್ಡ ಬೆದರಿಕೆ. 1.5 ಆದೀತು, 1.6 ಡಿಗ್ರಿ ಸೆಲ್ಸಿಯೆಸ್ ಅಸಹನೀಯ ಎಂದೇನೂ ಅಲ್ಲ. ಆದರೆ ಅದು ಲೋಕಕ್ಕೆ ಮಾರಕವಾಗುವ ಹೆಜ್ಜೆಯನ್ನು ತಡೆಯುವುದು ಮುಖ್ಯ.

“ಏರುತ್ತಿರುವ ಭೂಬಿಸಿ ಪ್ರಕೃತಿಯನ್ನು ಬೀಳಿಸುತ್ತಿದೆ. ಹೆಚ್ಚೆಚ್ಚು ಭೂಬಿಸಿ ತಗ್ಗಿಸುವುದು ನಮ್ಮ ಪರಿಸರ ಮತ್ತು ನಮ್ಮನ್ನು ಉಳಿಸಿಕೊಳ್ಳಲು. ಮುಂದಿನ ತಲೆಮಾರು ಮತ್ತು ಮುಂದೆಯೂ ನಿಸರ್ಗ ಇರಬೇಕೆಂದರೆ ಇದು ಅನಿವಾರ್ಯ” ಎನ್ನುತ್ತಾರೆ ದಿಲ್ಲಿಯ ವಿಷಯ ತಜ್ಞ ಪ್ರೊಫೆಸರ್ ನವ್ರೋಜ್ ದುಬಾಶ್.

Join Whatsapp