ಪಠ್ಯದಲ್ಲಿ ‘ಮೈಸೂರು ಹುಲಿ’ ಟಿಪ್ಪುವನ್ನು ಅಳಿಸಿಹಾಕಿಲ್ಲ, ಸಾಕ್ಷ್ಯವಿಲ್ಲದ್ದನ್ನು ತೆಗೆದಿದ್ದೇವೆ ಎಂದ ಬಿಸಿ ನಾಗೇಶ್

Prasthutha|

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಪಾಠಗಳನ್ನು ಶಾಲಾ ಪಠ್ಯಗಳಲ್ಲಿ ಅಳಿಸಿಹಾಕಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಮೈಸೂರು ಹುಲಿ ಎಂಬ ಬಿರುದನ್ನು ಉಳಿಸಿಕೊಂಡು, ಸಾಕ್ಷ್ಯವಿಲ್ಲದ ವಿಚಾರಗಳನ್ನು ಮಾತ್ರ ಕೈಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

- Advertisement -

ಶಾಲಾ ಪಠ್ಯದಲ್ಲಿ ಟಿಪ್ಪು ಪಾಠವನ್ನು ಸಂಪೂರ್ಣವಾಗಿ ಕೈಬಿಡುವಂತೆ ಕೋರಿ ಶಾಸಕ ಅಪ್ಪಚ್ಚು ರಂಜನ್‌ ಒತ್ತಾಯಿಸಿದ್ದರು. ಆದರೆ ನಾವು ಆಧಾರವಿಲ್ಲದ ವಿಚಾರಗಳನ್ನು ಕೈಬಿಟ್ಟು, ಕೆಲವೊಂದು ಪಾಠವನ್ನು ಉಳಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಟಿಪ್ಪು ಬಗ್ಗೆ ಪಠ್ಯದಲ್ಲಿ ಏನಿರಬೇಕು ಮತ್ತು ಪುಸ್ತಕದಿಂದ ಏನನ್ನು ಅಳಿಸಿಹಾಕಬೇಕು ಎಂಬುದನ್ನು ರಚನೆಯಾಗಿರುವ ಸಮಿತಿಯು ನಿರ್ಧರಿಸಲಿದೆ ಎಂದು ನಾಗೇಶ್ ತಿಳಿಸಿದ್ದಾರೆ.

ಟಿಪ್ಪು ಪಾಠವನ್ನು ಕೈಬಿಡುವಂತೆ ಕೋರಿ ಶಾಸಕ ಅಪ್ಪಚ್ಚು ರಂಜನ್‌ ಸರಕಾರವನ್ನು ಒತ್ತಾಯಿಸಿದ್ದರು. ಟಿಪ್ಪು ಆಡಳಿತದಲ್ಲಿ ಕನ್ನಡ ತೆಗೆದು ಪರ್ಷಿಯನ್‌ ಭಾಷೆ ಜಾರಿ ತಂದದ್ದು ಮತ್ತು ಕೊಡವರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿರುವುದಾಗಿ ರಂಜನ್ ಹೇಳಿದ್ದರು.

Join Whatsapp