ಭಾರತ ಬಿಡಲು 8 ಸಾವಿರಕ್ಕೂ ಅಧಿಕ ಕೋಟ್ಯಧೀಶರಿಂದ ಸಿದ್ಧತೆ : ಯಾಕೆ ಗೊತ್ತಾ?!

Prasthutha: June 15, 2022

ನವದೆಹಲಿ: ಕಠಿಣ ತೆರಿಗೆ ನಿಯಮಗಳು ಮತ್ತು ಶಕ್ತಿಶಾಲಿ ಪಾಸ್ ಪೋರ್ಟ್ ಗಳನ್ನು ಹೊಂದುವ ಬಯಕೆಯಿಂದ 2022 ರಲ್ಲಿ ಸರಿಸುಮಾರು 8,000 ಕೋಟ್ಯಧೀಶರು ಭಾರತವನ್ನು ತೊರೆಯಲಿದ್ದಾರೆ ಎಂದು ವಿಶ್ವಾದ್ಯಂತ ವಲಸೆ ಪ್ರವರ್ತಿಗಳ ಮೇಲೆ ನಿಗಾಯಿರಿಸುವ ಹೆನ್ಲಿ ಗ್ಲೋಬಲ್ ಸಿಜಿಜನ್ಸ್ ಸಂಸ್ಥೆಯು ವರದಿ ಮಾಡಿದೆ.

2019 ರಿಂದ ಇದುವರೆಗೆ ಭಾರತ 7000 ಕ್ಕೂ ಅಧಿಕ ಮಿಲಿಯಾಧೀಶರನ್ನು ಕಳೆದುಕೊಂಡಿದ್ಸು ಕಳೆದ ಏಳು ವರ್ಷಗಳಲ್ಲಿ 8,81,254 ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಕಳೆದ ಡಿಸೆಂಬರಿನಲ್ಲಿ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಸಂಸತ್ತಿನಲ್ಲಿ ತಿಳಿಸಿದ್ದರು. ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಾದ ದತ್ತಾಂಶಗಳ ಪ್ರಕಾರ 1,33,83,718 ಭಾರತೀಯರು ಈಗ ವಿದೇಶದಲ್ಲಿ ವಾಸವಾಗಿದ್ದಾರೆ ಎಂದು ಹೇಳಿದ್ದಾರೆ.

ಜೀವನ ಮಟ್ಟದಲ್ಲಿ ಸುಧಾರಣೆ ಕಂಡುಕೊಳ್ಳಲು ಮತ್ತು ವಿದೇಶದ ಹಣಕಾಸು ಸೇವೆಗಳು, ಆರೋಗ್ಯ ರಕ್ಷಣೆ, ತಂತ್ರಜ್ಞಾನ ಕ್ಷೇತ್ರದ ಸದೃಢ ಬೆಳವಣಿಗೆಯೇ ಭಾರತೀಯರು ದೇಶದಿಂದ ವಲಸೆ ಹೋಗಲು ಮುಖ್ಯ ಕಾರಣ ಎಂದು ನ್ಯೂ ವರ್ಲ್ಡ್ ವೆಲ್ತ್ ನ ಸಂಶೋಧನಾ ಮುಖ್ಯಸ್ಥ ಆಂಡ್ರೂ ಅಮೋಲಿಸ್ ಹೇಳಿದ್ದಾರೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!