ಚೀತಾ ಯೋಜನೆಯ ರೂವಾರಿಗೆ ಕಾರ್ಯಪಡೆಯಲ್ಲಿ ಸ್ಥಾನವಿಲ್ಲ!

Prasthutha|

ನವದೆಹಲಿ: ಭಾರತದ ವನ್ಯ ಜೀವಿ ಇನ್ ಸ್ಟಿಟ್ಯೂಟಿನ ಡೀನ್ ಹಾಗೂ 13 ವರ್ಷಗಳ ಚೀತಾ ಯೋಜನೆಯ ಛಲಗಾರ, ಇತ್ತೀಚೆಗೆ ನಮೀಬಿಯಾದಿಂದ ಮೊದಲ ಹಂತದ ಚಿಟ್ಟೆಹುಲಿಗಳನ್ನು ತಂದ ಯಾದವೇಂದ್ರದೇವ್ ವಿಕ್ರಮಸಿಂಹ ಜಾಲಾ ಅವರು ಸರಕಾರದ ಚೀತಾ ಕಾರ್ಯಪಡೆಯಲ್ಲಿ ಸ್ಥಾನ ನೀಡದಿರುವುದು ಬೆಳಕಿಗೆ ಬಂದಿದೆ.

- Advertisement -

2009ರಿಂದ ಮಹತ್ವಾಕಾಂಕ್ಷೆಯ ಚೀತಾ ಯೋಜನೆಯ ರೂವಾರಿಯಾಗಿರುವ ಜಾಲಾ ಅವರು ಅದಕ್ಕಗತ್ಯದ ಎಲ್ಲ ತಾಂತ್ರಿಕ ನೆರವು ಒದಗಿಸಿದವರು. ಸಂರಕ್ಷಣಾ ತಜ್ಞ ಎಂ. ಕೆ. ಸಂಜಿತ್ ಸಿಂಗ್ 2010ರಲ್ಲಿ ರಚಿಸಿದ್ದ ಚೀತಾ ಕಾರ್ಯ ಪಡೆಯ ಸದಸ್ಯರು ಜಾಲಾ.

ಸೆಪ್ಟೆಂಬರ್ 16ರಂದು ನಮೀಬಿಯಾದ ಕುನೋ ರಾಷ್ಟ್ರೀಯ ಉದ್ಯಾನದಿಂದ ಮೊದಲ ಚೀತಾ ತಂಡ ತರುವುದಕ್ಕೆ ಮೊದಲೇ ಒಂದು ವಾರ ಕಾಲ ಕುನೋದಲ್ಲಿ ಈ ಚಿಟ್ಟೆಹುಲಿಗಳ ಜೊತೆಗೆ ಬೋನು ಸಂವಾದ ನಡೆಸಿ; ಲಾಲಿಸಿದವರು. ಅವುಗಳು ಬರುವುದಕ್ಕೆ  ಎಲ್ಲ ರೀತಿಯ ಮಾನಸಿಕ ನೆರವನ್ನು ಅವರು ಒದಗಿಸಿದ್ದರು.

- Advertisement -

ಜಾಲಾ ಅವರು ಚೀತಾ ಯೋಜನೆ ರೂಪಿಸಿದವರು. 2009ರಲ್ಲಿ ಆಗಿನ ಅರಣ್ಯ ಸಚಿವರ ಜೈರಾಮ್ ರಮೇಶ್ ಅವರು ಅದಕ್ಕೆ ಅನುಮೋದನೆ ದೊರಕಿಸಿದ್ದರು. ಚೀತಾ ಯಾಕ್ಷನ್ ಯೋಜನೆಯನ್ನು ಭಾರತ ಸರಕಾರವು 2022ರ ಜನವರಿಯಲ್ಲಿ ಅಂತಿಮಗೊಳಿಸಿದಾಗ ಜಾಲಾ ಆ ಬಗ್ಗೆ ಪ್ರಮುಖ ಬರಹಗಾರರಾಗಿದ್ದರು. ಜಾಲಾ ಅವರೇ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಪ್ರಸಿದ್ಧ ತಾಂತ್ರಿಕ ತಜ್ಞರ ಜೊತೆಗೆ ಈ ಬಗ್ಗೆ ಸಂವಾದ ನಡೆಸಿದ್ದರು.

ಸೆಪ್ಟೆಂಬರ್ 20ರಂದು ಎನ್ ಟಿಸಿಎ- ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು 9 ಜನರ ಹೊಸ ಕಾರ್ಯ ಪಡೆಯನ್ನು ರಚಿಸಿತು. ಅದರಲ್ಲಿ ಯಾದವೇಂದ್ರದೇವ್ ವಿಕ್ರಮಸಿಂಹ ಜಾಲಾ ಅವರು ಸ್ಥಾನ ಪಡೆದಿರಲಿಲ್ಲ.

ಚೀತಾಗಳನ್ನು ಭಾರತಕ್ಕೆ ತಂದ ವಿಜ್ಞಾನಿಗೆ ಸದರಿ ಕಾರ್ಯಪಡೆಯಲ್ಲಿ ಸ್ಥಾನ ನೀಡದಿರುವುದು ಬಿಜೆಪಿ ಸರಕಾರದ ಅತಿ(ಯಾದ) ಸೂಕ್ಷ್ಮ ನಡೆಯೇ ಸರಿ.



Join Whatsapp