‘ದಿ ಮಣಿಪುರ ಫೈಲ್ಸ್’ ಸಿನಿಮಾ ಮಾಡಬೇಕು: ಶಿವಸೇನೆ

Prasthutha|

ಮುಂಬೈ: ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಣಿಪುರ ಕಾಶ್ಮೀರಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಹಾಗಾಗಿ “ದಿ ಮಣಿಪುರ ಫೈಲ್ಸ್ ” ಸಿನಿಮಾ ಮಾಡಬಹುದು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಪಕ್ಷದ ಮುಖ್ಯವಾಣಿಯಾಗಿರುವ “ಸಾಮ್ನಾ” ಪ್ರತಿಕೆ ವರದಿ ಮಾಡಿದೆ.

- Advertisement -

ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ವಿರುದ್ಧ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ದೌರ್ಜನ್ಯ ಕಾಶ್ಮೀರಕ್ಕಿಂತ ಕೆಟ್ಟದಾಗಿ ಎಂದು ಹೇಳಿದ್ದಾರೆ. 2022ರಲ್ಲಿ ಆಗಸ್ಟ್ 5ರಂದು “ಸಾಮ್ನಾ” ಪ್ರತಿಕೆಯ ಸಂಪಾದಕರಾಗಿ ಉದ್ಧವ್ ಠಾಕ್ರೆ ನೇಮಕಗೊಂಡರು. ಅವರು ಇದೀಗ ಈ ಪ್ರತಿಕೆಯ ಸಂಪಾದಕೀಯದಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಬರೆದಿದ್ದಾರೆ.

- Advertisement -


ಮೇ, 4ರಂದು ಚಿತ್ರಿಸಲಾಗಿದ್ದ, ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋವನ್ನು ಇತ್ತಿಚೇಗೆ ವೈರಲ್ ಮಾಡಲಾಗಿತ್ತು. ಇದರಲ್ಲಿ ಪುರುಷರ ಗುಂಪೊಂದು ಇಬ್ಬರು ಸ್ತ್ರೀಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಮಾಡಲಾಗಿದೆ.



Join Whatsapp