6ನೇ ಮಹಡಿಯಿಂದ ಜಿಗಿದ ವ್ಯಕ್ತಿ: ಜೀವ ಉಳಿಸಿದ ನೆಟ್

Prasthutha|

ಮುಂಬೈ: ತನ್ನ ಭಾವಿ ಪತ್ನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಸಚಿವಾಲಯದ ಕಟ್ಟಡದ 6ನೇ ಮಹಡಿಯಿಂದ ಜಿಗಿದ ಘಟನೆ ನವೆಂಬರ್ 17ರಂದು ಮುಂಬೈನಲ್ಲಿ ನಡೆದಿದೆ. ಅದೃಷ್ಟವಶಾತ್ ಕಟ್ಟಡದಲ್ಲಿ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ನೆಟ್ ಮೇಲೆ ಬಿದ್ದಿದ್ದರಿಂದ ಆತನ ಜೀವ ಉಳಿದಿದೆ.

- Advertisement -

ಆತ ಕಟ್ಟಡದಿಂದ ಜಿಗಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆತ ಬಹಳ ಹೊತ್ತು ನೆಟ್’ನಲ್ಲಿ ಮಲಗಿರುವುದು ಸೆರೆಯಾಗಿದೆ. ತನ್ನ ಭಾವಿ ಪತ್ನಿಯನ್ನು ಅತ್ಯಾಚಾರ ಮಾಡಲಾಗಿದ್ದು, ಈ ಸಂಬಂಧ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನಾಲ್ಕು ಬಾರಿ ಪತ್ರ ಬರೆದರೂ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಿಲ್ಲ ಎಂದು ದೂರುತ್ತಿರುವುದು ವೀಡಿಯೋದಲ್ಲಿದೆ.

ನೆಟ್’ಗೆ ಬಿದ್ದ ಆತನನ್ನು ಪೊಲೀಸರು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



Join Whatsapp