ಹಾಡಹಗಲೇ ವ್ಯಕ್ತಿಯ ಅಡ್ಡಗಟ್ಟಿ ಕೊಲೆ; ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸೆರೆ

Prasthutha|

ಬೆಂಗಳೂರು: ಮಕ್ಕಳನ್ನು ಶಾಲೆಗೆ ಬಿಟ್ಟು ಮನೆಗೆ ಸ್ಕೂಟರ್ ‌ನಲ್ಲಿ ವಾಪಾಸಾಗುತ್ತಿದ್ದ ಗಣೇಶ್ ಅಲಿಯಾಸ್ ಕುಂದ್ರಾಪಿ ಗಣೇಶ್(34) ನನ್ನು ಮಂಗಳವಾರ ಹಾಡಹಗಲೇ ಅಡ್ಡಗಟ್ಟಿ ಮಚ್ಚು ಲಾಂಗ್‌ನಿಂದ ಕೊಚ್ಚಿ ಕೊಲೆ‌ ಮಾಡಿದ್ದ ಐವರನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ‌ ಶೇಷಾದ್ರಿಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement -

ಶೇಷಾದ್ರಿಪುರಂನ ಜಯಚಾಮರಾಜೇಂದ್ರ ಒಡೆಯರ್ ನಗರದ ಶರತಕುಮಾರ್(31), ಸತ್ಯ(29), ವಿ.ವಿ.ಗಿರಿ ಕಾಲೋನಿಯ ಶರಣ್(26), ಶ್ರೀರಾಮಪುರಂನ ಗೌತಮ್‍ನಗರದ ಜಾನ್ (23) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ಅವರು ತಿಳಿಸಿದ್ದಾರೆ.

ಶೇಷಾದ್ರಿಪುರಂನ ಜೆ.ಸಿ.ಡಬ್ಲ್ಯು ನಗರದಲ್ಲಿ ನರಸಿಂಹ ಹಾಗೂ ಷಣ್ಮುಗವಲ್ಲಿ ಅವರ ಎರಡು ಕುಟುಂಬಗಳು ವಾಸವಾಗಿದ್ದವು.

- Advertisement -

ನರಸಿಂಹ ಅವರ ಪುತ್ರನಾದ ಕೊಲೆಯಾದ ಗಣೇಶ್ ಕಳೆದ. 2020ರ ಕರೋನಾ ಲಾಕ್ ಡೌನ್ ಸಮಯದಲ್ಲಿ ಬಿಬಿಎಂಪಿ ವತಿಯಿಂದ ಸಾರ್ವಜನಿಕರಿಗೆ ಉಚಿತ ಹಾಲನ್ನು ಹಂಚುತ್ತಿದ್ದು, ಇದನ್ನು ಸಹಿಸದ ಷಣ್ಮುಗವಲ್ಲಿ ಕಡೆಯ ರಾಜು, ವಿನೋದ್, ಶರತ್‍ಕುಮಾರ್, ಅಜಿತ್‍ಕುಮಾರ್ ಮತ್ತಿತ್ತರರು ಸೇರಿ ಮೃತ ಗಣೇಶ್ ಮತ್ತು ಅತನ ಕಡೆಯವರ ವಿರುದ್ದ ಗಲಾಟೆ ಮಾಡಿದ್ದರು.

ಗಲಾಟೆ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎರಡು ಗುಂಪಿನವರ ವಿರುದ್ದ ದೂರು ಪ್ರತಿ ದೂರುಗಳು ದಾಖಲಾಗಿದ್ದವು. ಇದೇ ವಿಚಾರವಾಗಿ ಉಂಟಾದ ದ್ವೇಷದಲ್ಲಿ ಎದುರು ಗುಂಪಿನವರು ಜೈಲಿನಿಂದ ಹೊರ ಬಂದ ನಂತರ ಮೃತ ಗಣೇಶನ ಮೇಲೆ ಹಳೇಯ ದ್ವೇಷ ಸಾಧಿಸುತ್ತಿದ್ದು, ನಿನ್ನೆ ಬೆಳಿಗ್ಗೆ  9ರ ವೇಳೆ ಗಣೇಶ್ ಹೋಂಡಾ ಆಕ್ವೀವಾ ಸ್ಕೂಟರ್ ನಲ್ಲಿ  ಮಕ್ಕಳನ್ನು ಮಲ್ಲೇಶ್ವರಂನಲ್ಲಿರುವ ಶಾಲೆಯೊಂದಕ್ಕೆ ಬಿಟ್ಟು ವಾಪಸ್ಸು ಶೇಷಾದ್ರಿಪುರಂನ ನಟರಾಜ್ ಥಿಯೇಟರ್ ಬಳಿ ಮನೆಗೆ  ಬರುತ್ತಿದ್ದಾಗ ಐವರು ಬಂಧಿತ ದುಷ್ಕರ್ಮಿಗಳು ಆತನನ್ನು ಅಡ್ಡಗಟ್ಟಿ ಮಚ್ಚು, ಚಾಕುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡ ಗಣೇಶ್ ನನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡ ಶೇಷಾದ್ರಿಪುರಂ ಪೊಲೀಸ್ ಇನ್ಸ್‌ಪೆಕ್ಟರ್  ರವಿ.ಎಂ.ಎಸ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

Join Whatsapp