ಮಾನಸಿಕ ರೋಗಿಗಳ ನಡುವೆ ಮೊಳಕೆಯೊಡೆದ ಪ್ರೇಮ; ಮದುವೆಗೆ ಮುಂದಾಗಿರುವ ಜೋಡಿ

Prasthutha|

ಚೆನ್ನೈ: ಮಾನಸಿಕ ರೋಗಿಗಳಿಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ವಿವಾಹಕ್ಕೆ ಮುಂದಾಗಿರುವ ಘಟನೆ ಚೆನ್ನೈನ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

- Advertisement -

ಪ್ರೇಮಿಗಳನ್ನು ಚೆನ್ನೈನ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹೇಂದ್ರನ್(42 ) ಮತ್ತು ದೀಪಾ (36) ಎಂದು ಗುರುತಿಸಲಾಗಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಎರಡು ವರ್ಷಗಳ ಹಿಂದೆ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು.


ಕೌಟುಂಬಿಕ ಕಲಹದಿಂದ ಮಹೇಂದ್ರನ್ ‘ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್’ನಿಂದ ಬಳಲುತ್ತಿದ್ದರೆ, ತಂದೆಯ ಸಾವಿನಿಂದ ದೀಪಾ ಖಿನ್ನತೆಗೆ ಒಳಗಾಗಿದ್ದರು.

- Advertisement -


ಈ ಕುರಿತು ಮಾತನಾಡಿದ ಮಹೇಂದ್ರನ್, ಕುಟುಂಬದ ಆಸ್ತಿ ಸಮಸ್ಯೆ ಕಾರಣ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ನಾನು ಚಿಕಿತ್ಸೆಗೆಂದು ಈ ಆಸ್ಪತ್ರೆಗೆ ಬಂದಿದ್ದೆ. ಚಿಕಿತ್ಸೆ ಬಳಿಕ‌ ಗುಣಮುಖನಾಗಿದ್ದು ಕಿಲ್ಪಾಕ್ ಮೆಂಟಲ್ ಅಸ್ಸಿಲಮ್ ನ ಡೇ ಕೇರ್ ಸೆಂಟರ್ ನಲ್ಲೆ ಕೆಲಸ ಮಾಡುತ್ತಿದ್ದೆ. ದೀಪಾ ಅಲ್ಲಿಗೆ ಚಿಕಿತ್ಸೆಗಾಗಿ ಬಂದಿದ್ದಳು. ನಾನು ಆಕೆಯನ್ನು ಚೆನ್ನಾಗಿ ನೋಡಿಕೊಂಡೆ. ಅದು ನಮ್ಮ‌ ನಡುವಿನ ಪ್ರೀತಿಗೆ ಕಾರಣವಾಯಿತು. ದೀಪಾ ಮನಸ್ಸು ನನ್ನ ತಾಯಿಯಂತೆ. ನನ್ನ ತಾಯಿ ಶಿಕ್ಷಕಿ, ದೀಪಾ ಕೂಡಾ ಒಬ್ಬ ಶಿಕ್ಷಕಿ. ನನ್ನ ಬದುಕಿನ ಸಂಬಂಧಗಳು ದೀಪಾಗೆ ಹೊಂದಿಕೊಳ್ಳುತ್ತಿದೆ. ಇದರಿಂದ ಒಂದಾಗಿ ಜೀವನ‌ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.


ಈ ಬಗ್ಗೆ ಮಾತನಾಡಿದ ದೀಪಾ, ನನ್ನ ತಂದೆ 2016ರಲ್ಲಿ ನಿಧನರಾದರು. ಅವರ ಸಾವಿನ ದುಃಖವನ್ನು ಸಹಿಸಲಾಗದೆ ನಾನು ಮಾನಸಿಕ ಅಸ್ವಸ್ಥಳಾದೆ. ಅದರ ನಂತರ ನಾನು ಮಾನಸಿಕ ಚಿಕಿತ್ಸೆಗೆ ಬಂದೆ. ಈಗ ಸರಿಯಾಗಿದ್ದೇನೆ ಎಂದು‌ ಹೇಳಿದರು.


ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಅರಳಿದ ಪ್ರೇಮಕಥೆ ಇದೀಗ ವೈರಲ್ ಆಗಿದ್ದು, ಬರಡಾಗಿ‌ ಹೋಗಿದ್ದ ಎರಡು‌‌ ಜೀವಗಳ ನಡುವೆ ಚಿಗುರೊಡೆದ ಪ್ರೇಮ ಹೊಸ ಬದುಕಿಗೆ ಕಾರಣವಾಗಿದೆ.

Join Whatsapp