ನೆರವೇರಿದ ತಾಯಿಯ ಕೊನೆಯ ಆಸೆ; ಐಸಿಯು ವಾರ್ಡ್‌ನಲ್ಲೇ ವಿವಾಹವಾದ ಯುವತಿ

Prasthutha|

ಪಾಟ್ನಾ: ತಾಯಿಯೊಬ್ಬರ ಕೊನೆಯ ಆಸೆಯಂತೆ ಮಗಳು ವಿವಾಹವಾಗಿರುವ ಅಪರೂಪದ ಘಟನೆ ಬಿಹಾರ ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ನಡೆದಿದೆ.

- Advertisement -


ಪೂನಂ ಕುಮಾರಿ ವರ್ಮಾ ಎಂಬ ಮಹಿಳೆ ಐಸಿಯು ವಾರ್ಡ್’ನಲ್ಲಿ ತನ್ನ ಮಗಳ ಮದುವೆ ನಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ.
ಪೂನಂ ಅವರು ತಮ್ಮ ಮಗಳು ಚಾಂದಿನಿ ಕುಮಾರಿಗೆ ಇಂಜಿನಿಯರ್ ಆಗಿರುವ ಸುಮಿತ್ ಗೌರವ್ ಅವರೊಂದಿಗೆ ವಿವಾಹ ನಿಶ್ಚಯವಾಗಿತ್ತು.


ಆದರೆ ಪೂನಂ ಆರೋಗ್ಯ ಹದಗೆಟ್ಟಾಗ, ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಇಬ್ಬರನ್ನೂ ಮದುವೆಯಾಗುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆ ಮಗಳು ತಾಯಿಯ ಆಸೆ ಈಡೇರಿಸಲು ಮುಂದಾಗಿದ್ದಾರೆ. ಐಸಿಯುನಲ್ಲಿ ಮದುವೆ ಮಾಡಲು ಆಸ್ಪತ್ರೆಯ ಅನುಮತಿ ಕೋರಿದ್ದಾರೆ.

- Advertisement -


ಆಸ್ಪತ್ರೆಯ ಸಮ್ಮತಿ ಬಳಿಕ ತಾಯಿ ಎದುರಿನಲ್ಲೇ ಐಸಿಯುನಲ್ಲಿ ಇಬ್ಬರು ತಾಳಿ ಕಟ್ಟಿಕೊಂಡು ವಿವಾಹವಾಗಿದ್ದಾರೆ.
ಹೃದ್ರೋಗದಿಂದ ಬಳಲುತ್ತಿದ್ದ ಯುವತಿಯ ತಾಯಿ ಪೂನಂ ಅವರು ಮದುವೆಯಾದ ಕೇವಲ ಎರಡೇ ಗಂಟೆಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ.



Join Whatsapp