ನವದೆಹಲಿ: ‘INDIA’ ಮೈತ್ರಿಕೂಟದ ಭಾಗವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಕೇರಳದಲ್ಲಿ ಲೋಕಸಭೆ ಚುನಾವಣೆಗೆ ನಾಲ್ಕು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ವಯನಾಡ್ ಮತ್ತು ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್ ಪ್ರತಿನಿಧಿಸುತ್ತಿರುವ ತಿರುವನಂತಪುರಂ ಕ್ಷೇತ್ರಗಳೂ ಇದರಲ್ಲಿ ಸೇರಿವೆ.
ರಾಹುಲ್ ಗಾಂಧಿ ಅವರು ಪ್ರತಿನಿಧಿಸುತ್ತಿರುವ ವಯನಾಡ್ನಿಂದ ಅನ್ನಿ ರಾಜಾ ಹೆಸರನ್ನು ಘೋಷಿಸಿದರೆ, ಶಶಿ ತರೂರ್ ಪ್ರತಿನಿಧಿಸುತ್ತಿರುವ ತಿರುವನಂತಪುರಂನಿಂದ ಪನ್ನಿಯನ್ ರವೀಂದ್ರನ್ ಹೆಸರನ್ನು ಘೋಷಿಸಿದೆ. ತ್ರಿಶೂರ್ನಿಂದ ವಿಎಸ್ ಸುನಿಲ್ ಕುಮಾರ್ ಮತ್ತು ಅರುಣ್ ಕುಮಾರ್ ಹೆಸರನ್ನು ಘೋಷಿಸಿದೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿ ಬಿಜೆಪಿ ವಿರುದ್ಧ ಹೋರಾಟ ಸಂಘಟಿಸುವುದಾಗಿ ಘೋಷಿಸಿದ ಎಡ ಪಕ್ಷಗಳ ಪೈಕಿ ಒಂದಾದ ಸಿಪಿಐ ಅಭ್ಯರ್ಥಿ ಘೋಷಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಎಡಿಎಫ್ ಮತ್ತು ಯುಡಿಎಫ್ ಒಂದಾಗಿ ಚುನಾವಣೆ ಎದುರಿಸಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ರಾಹುಲ್ ಗಾಂಧಿ ಅವರು ಗಾಂಧಿ ಕುಟುಂಬದ ಭದ್ರ ಕೋಟೆ ಎಂದು ಪರಿಗಣಿಸಲ್ ಪಟ್ಟಿರುವ ಸದ್ಯ ಸೋನಿಯಾ ಗಾಂಧಿ ಅವರು ಪ್ರತಿನಿಷಿಸುತ್ತಿರುವ ರಾಯ್ ಬರೇಲಿಯಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಎನ್ನಲಾಗುತ್ತಿದೆ.