ಮುಸ್ಲಿಮರ ವೇಷವಿಧಾನವನ್ನು ನಿಂದಿಸಿರುವ ಘಟನೆ ಖಂಡನೀಯ; ಕ್ರಮ ಕೈಗೊಳ್ಳಲು SKSSF ಕೊಡಗು ಜಿಲ್ಲಾ ಸಮಿತಿ ಆಗ್ರಹ

Prasthutha|

- Advertisement -

ಮಡಿಕೇರಿ: ವೆಸ್ಟ್ ಕೊಳಕ್ಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ವೇಷವಿಧಾನಗಳಾದ ಶಿರವಸ್ತ್ರ ಹಾಗೂ ಬುರ್ಖಾ ಧರಿಸಿಕೊಂಡು ವೇದಿಕೆಯಲ್ಲಿ ಕುಣಿದಾಡಿ ಅವಹೇಳಿಸಿದ ಘಟನೆಯನ್ನು ಎಸ್ಕೆಎಸ್ಸೆಸ್ಸಫ್ ಕೊಡಗು ಜಿಲ್ಲಾ ಸಮಿತಿಯು ಖಂಡಿಸುತ್ತದೆ.
ಯಾವುದೇ ಧರ್ಮವು ಅನ್ಯ ಧರ್ಮವನ್ನು ಹಾಗೂ ಅದರ ಆಚಾರ ವಿಚಾರಗಳನ್ನು ಅವಹೇಳನ ನಡೆಸಲು ಹೇಳುವುದಿಲ್ಲ. ಬದಲಾಗಿ ಎಲ್ಲಾ ಧರ್ಮಗಳನ್ನು ಗೌರವಿಸಲು ಒತ್ತಿ ಹೇಳುತ್ತದೆ. ಆದರೆ ಈ ಘಟನೆಗೆ ನೇತೃತ್ವ ನೀಡಿದ ಕಿಡಿಗೇಡಿಗಳು ಯಾವ ಧರ್ಮವನ್ನು ಪಾಲನೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಜಿಲ್ಲೆಯಲ್ಲಿ ಇಸ್ಲಾಂ ಧರ್ಮದ ವಿರುದ್ಧ ಹಾಗೂ ಪ್ರವಾದಿ ವಿರುದ್ಧ ಅವಹೇಳನ ನಡೆಸಿದ ಘಟನೆಗಳು ನಡೆದಿದೆ. ಆದರೆ ಸೂಕ್ತ ಕ್ರಮ ಕೈಗೊಳ್ಳದೆ ಇರುವ ಕಾರಣ ಇಂತಹಾ ಘಟನೆಗಳು ಮರುಕಳಿಸುತ್ತಿದೆ. ಧರ್ಮ ನಿಂದನೆ ನಡೆಸುವ ಕಿಡಿಗೇಡಿಗಳಿಗೆ ಕಾನೂನಿನ ರುಚಿ ತಿಳಿಸುವುದಾದಲ್ಲಿ ಇಂತಹ ಘಟನೆಗಳಿಗೆ ತಡೆ ಹಾಕಬಹುದಾಗಿದೆ. ಕೊಳಕ್ಕೇರಿಯಲ್ಲಿ ಶಿರವಸ್ತ್ರ ಹಾಗೂ ಬುರ್ಖಾ ಧರಿಸಿ ಇಸ್ಲಾಂ ಧರ್ಮದ ವಿರುದ್ಧ ನಿಂದನಾತ್ಮಕ ಘಟನೆ ನಡೆದಿರುವುದು ಜಾತ್ಯತೀತ ನಾಯಕರೆನಿಸಿಕೊಂಡವರ ಸಮ್ಮುಖದಲ್ಲಿ ಹಾಗೂ ಜಾತ್ಯಾತೀತ ನಾಯಕರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಎಂಬುವುದು ಅತ್ಯಂತ ಖೇದಕರ.

- Advertisement -

ಈ ಘಟನೆಯಿಂದಾಗಿ ಇಸ್ಲಾಂ ಧರ್ಮದ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದುವುದರಿಂದ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಹಾಗೂ ಧರ್ಮ ನಿಂದನೆಗೆ ನೇತೃತ್ವ ನೀಡಿದ ಕಿಡಿಗೇಡಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ಕೆಎಸ್ಸೆಸ್ಸಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಖ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದರು

Join Whatsapp