ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ₹ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್

Prasthutha|

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ₹ 5 ಲಕ್ಷ ದಂಡ ವಿಧಿಸಿದೆ. ರೇಡಿಯೊ ಡಯೋಗ್ನಾಸಿಸ್ ವೈದ್ಯಕೀಯ ಸ್ನಾತಕೋತ್ತರ ಪದವಿಯ ಸೀಟ್ ಅನ್ನು ಬ್ಲಾಕ್ ಮಾಡುವ ಮೂಲಕ ಕಾನೂನು ಬಾಹಿರವಾಗಿ ಸೀಟು ಹಂಚಿಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಈ ಕ್ರಮಕೈಗೊಳ್ಳಲಾಗಿದೆ.

- Advertisement -

ಸೀಟು ವಂಚಿತರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಿ.ಕೆ.ರಜನಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.ಅರ್ಜಿದಾರರಿಗೆ ರೇಡಿಯೊ ಡಯೋಗ್ನಾಸಿಸ್​ ಸೀಟನ್ನು ಮರು ಹಂಚಿಕೆ ಮಾಡಬೇಕು ಎಂದೂ ಕೋರ್ಟ್ ನಿರ್ದೇಶಿಸಿದೆ.

ದಂಡದ ಮೊತ್ತದಲ್ಲಿ ₹ 2.5 ಲಕ್ಷ ಮೊತ್ತವನ್ನು ಡಾ.ಸಿ.ಕೆ.ರಜನಿ ಅವರಿಗೆ ಪಾವತಿಸಬೇಕು. ಉಳಿದ ₹ 2.5 ಲಕ್ಷ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹೆಸರಿನಲ್ಲಿ ಠೇವಣಿ ಇರಿಸಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

- Advertisement -

2023ರ ಸೆಪ್ಟೆಂಬರ್ 19ರಲ್ಲಿ ನಡೆದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ನನಗೆ ಅನ್ಯಾಯವಾಗಿದೆ’ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು.



Join Whatsapp