ಅಧಿವೇಶನಕ್ಕೆ ಪ್ರತಿಭಟನೆಯ ಬಿಸಿ| 55 ನಿಮಿಷ ತಡವಾಗಿ ಆರಂಭವಾದ ಕಲಾಪ

Prasthutha|

ಬೆಳಗಾವಿ: ಸುವರ್ಣ ವಿಧಾನಸೌಧ ಚಳಿಗಾಲದ ಅಧಿವೇಶನ ಗುರುವಾರ ನಿಗದಿತ ಸಮಯಕ್ಕಿಂತ 55 ನಿಮಿಷ ತಡವಾಗಿ ಆರಂಭವಾಯಿತು.

- Advertisement -

ಇಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ಸದಸ್ಯರು ಭಾಗಿಯಾಗಿದ್ದ ಕಾರಣ ಕಲಾಪ ತಡವಾಗಿ ಆರಂಭಿಸಲಾಯಿತು ಎಂದು ಹೇಳಲಾಗುತ್ತಿದೆ.

ರಾಜ್ಯ ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರದ ವಿರುದ್ಧ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಬೆಳಗಾವಿ ಗ್ರಾಮೀಣ ಜಿಲ್ಲೆ‌ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

- Advertisement -

ಪರಿಷತ್ತು ಕಲಾಪ ಸಂಬಂಧ ಬೆಳಗ್ಗೆ 11 ಗಂಟೆಗೆ ಸಮಯ ನಿಗದಿಯಾಗಿದ್ದರೂ, 55 ನಿಮಿಷ ತಡವಾಗಿ ಪರಿಷತ್ತು ಕಾರ್ಯ ಕಲಾಪ ಪ್ರಾರಂಭಿಸಲಾಯಿತು.ಇನ್ನೂ, ಕಲಾಪ ವೇಳೆಯ ಘಂಟೆ ಸತತ ಮೊಳಗಿಸಿದರೂ, ಸದಸ್ಯರು ಸದನದೊಳಗೆ ಹಾಜರಾಗುವ ಮನಸ್ಸು ಮಾಡಿರಲಿಲ್ಲ.

Join Whatsapp