ಗುಂಪು ಬೇರೆ ಬೇರೆ, ಚುನಾವಣೆ ಬಂದಾಗ ನಾವೆಲ್ಲಾ ಒಂದಾಗುತ್ತೇವೆ: ಸತೀಶ್ ಜಾರಕಿಹೊಳಿ

Prasthutha|

ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ಗುಂಪು, ನಮ್ಮ ಗುಂಪು ಬೇರೆ ಬೇರೆ ಇರಬಹುದು. ಆದರೆ, ಚುನಾವಣೆ ಬಂದಾಗ ನಾವೆಲ್ಲಾ ಒಂದಾಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

- Advertisement -


ನನ್ನ ಮೌನ ನನ್ನ ವೀಕ್ನೆಸ್ ಅಲ್ಲಾ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಅವರದ್ದೂ, ನಮ್ದು ಏನೂ ಇಲ್ಲ. ಸುತ್ತಿ ಹಾಕಿ ಯಾಕೆ ಹೆಬ್ಬಾಳ್ಕರ್ ಗೆ ತೆಗೆದುಕೊಂಡು ಹೋಗ್ತೀರಾ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ವಿರೋಧ ಮಾಡೊದಾದ್ರೆ ಎಂಎಲ್ಸಿ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ವಿರೋಧ ಮಾಡುತ್ತಿರಲಿಲ್ಲ. ನಮ್ಮ ಗುಂಪು ಬೇರೆ ಬೇರೆ ಇರಬಹುದು. ಇನ್ನು ಸರ್ಕಾರದಲ್ಲಿ ಎಲ್ಲಾ ನಾವು ಹೇಳಿದ್ದು ಆಗಬೇಕೆಂದಿಲ್ಲ. ಒಂದೊಂದು ಸಲ ಫೇಲ್ ಆಗುತ್ತೆ ಎಲ್ಲರ ಮಾತೂ ನಾಯಕರು ಕೇಳಬೇಕಾಗುತ್ತೆ ಖಡಕ್ಕಾಗಿಯೇ ಮಾತನಾಡಿದರು.