ರಾಜ್ಯದ ಜನರಿಗೆ ವಿದ್ಯುತ್ ಶಾಕ್ ಕೊಟ್ಟ ಸರ್ಕಾರ !

Prasthutha|

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್ ಗೆ ಸರಾಸರಿ 35ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.

- Advertisement -

ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳಿಗೂ (ಎಸ್ಕಾಂ) ಸರಾಸರಿ 35 ಪೈಸೆ ಹೆಚ್ಚಳ ಮಾಡಿ ಹಂಗಾಮಿ ಅಧ್ಯಕ್ಷ ಮಂಜುನಾಥ್ ಸೋಮವಾರ ಆದೇಶ ಹೊರಡಿಸಿದ್ದಾರೆ.

ಪ್ರತಿ ಯೂನಿಟ್‌ ಗೆ 5 ಪೈಸೆಗಳಷ್ಟು ಇಂಧನ ಶುಲ್ಕಗಳ ಹಾಗೂ ಪ್ರತಿ ಹೆಚ್.ಪಿ/ಕಿ.ವಾ/ಕೆ.ವಿ.ಎ.ಗೆ ₹10 ರಿಂದ ₹ 30 ರವರೆಗೆ ನಿಗದಿತ ಶುಲ್ಕಗಳ ಹೆಚ್ಚಳವನ್ನು ಅನುಮೋದಿಸಲಾಗಿದೆ. ಇದರೊಂದಿಗೆ ಪ್ರತಿ ಯೂನಿಟ್ ದರ 35 ಪೈಸೆಯಷ್ಟಾಗಿರುತ್ತದೆ (ಶೇ.4.33 ಹೆಚ್ಚಳ) ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. 



Join Whatsapp