ಅಂಗನವಾಡಿಗಳಲ್ಲಿ ಇನ್ನು ಮುಂದೆ ಪಾಮೊಲಿನ್‌ ಎಣ್ಣೆ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಕೆಗೆ ಸರ್ಕಾರ ನಿರ್ಧಾರ

Prasthutha|

ಬೆಂಗಳೂರು: ರಾಜ್ಯದ 69,899 ಅಂಗನವಾಡಿಗಳಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೂರೈಸುವ ಪೌಷ್ಠಿಕ ಆಹಾರ ತಯಾರಿಕೆಗೆ ಇನ್ನು ಮುಂದೆ ಪಾಮೊಲಿನ್‌ ಎಣ್ಣೆ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

- Advertisement -

 ಈ ಕುರಿತಾಗಿ ನಿನ್ನೆ ಸಿಎಂ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜೊತೆಗೆ ಸಿಎಂ ಸಿದ್ಧರಾಮಯ್ಯ ಈ ಕುರಿತಾಗಿ ಟ್ವೀಟ್​ ಕೂಡ ಮಾಡಿದ್ದಾರೆ.

ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಅವಶ್ಯಕವಾದ ಲಿನೋಲಿಕ್ ಮತ್ತು ಅಲ್ಫಾ ಲಿನೋಲಿಕ್ ಆ್ಯಸಿಡ್‌ಗಳು ಸೂರ್ಯಕಾಂತಿ ಎಣ್ಣೆಯಲ್ಲಿ ಇರುವ ಕಾರಣಕ್ಕಾಗಿ ರಾಜ್ಯದ 69,899 ಅಂಗನವಾಡಿಗಳಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೂರೈಸುವ ಪೌಷ್ಠಿಕ ಆಹಾರ ತಯಾರಿಕೆಗೆ ಇನ್ನುಮುಂದೆ ಪಾಮೊಲಿನ್‌ ಎಣ್ಣೆ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಕೆ ಮಾಡಲು ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ.

- Advertisement -

66. 04 ಕೋಟಿ ರೂ. ವೆಚ್ಚ

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ವಿತರಿಸಲು ಪಾಮೊಲಿನ್‌ ಎಣ್ಣೆ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಕೆಗೆ 66. 04 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.

ಸೂರ್ಯಕಾಂತಿ ಎಣ್ಣೆ ಏಕೆ?

ಲಿನೋಲಿಕ್ ಮತ್ತು ಅಲ್ಫಾ ಲಿನೋಲಿಕ್ ಆ್ಯಸಿಡ್‌ಗಳು ಸೂರ್ಯಕಾಂತಿ ಎಣ್ಣೆಯಲ್ಲಿ ಇರುವುದರಿಂದ ಇದು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಠಿಕಾಂಶ ಒದಗಿಸುತ್ತದೆ. ಅಲ್ಲದೇ ಪಾಮೊಲಿನ್‌ ಎಣ್ಣೆ ಬಗ್ಗೆ ಸಾಕಷ್ಟು ದೂರುಗಳು ನೀಡಲಾಗಿದೆ. ಹಾಗಾಗಿ ರಾಜ್ಯದ 69,899 ಅಂಗನವಾಡಿಗಳಲ್ಲಿ ಪಾಮೊಲಿನ್‌ ಎಣ್ಣೆ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಕೆ ರಾಜ್ಯ ಸರ್ಕಾರ ತೀಮಾರ್ನಿಸಿದೆ.

Join Whatsapp