ಅಂದು ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್..!

Prasthutha|

ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಾ, ಕಸದ ತೊಟ್ಟಿಯಲ್ಲಿ ತಿಂದು ಬಿಸಾಕಿದ ಹಳಸಿದ ಆಹಾರ ತಿಂದು ಬದುಕುತ್ತಿದ್ದ ಪುಟ್ಟ ಬಾಲಕಿ ಇಂದು ಡಾಕ್ಟರ್ ಆಗಿದ್ದಾರೆ.

- Advertisement -


ಹಿಮಾಚಲ ಪ್ರದೇಶದ ಟಿಬೆಟನ್ ನಿರಾಶ್ರಿತರ ಶಿಬಿರದ ವಿದ್ಯಾರ್ಥಿನಿ ಪಿಂಕಿ ಹರ್ಯಾನ್ ದೇಶದ ಗಮನಸೆಳೆದಿದ್ದಾರೆ.


ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಮೆಕ್ಲಿಯೋಡ್ ಗಂಜ್ ನಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಪಿಂಕಿ ಹರಿಯಾಣ, ಬಾಲ್ಯದಲ್ಲಿ ಪೋಷಕರೊಂದಿಗೆ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಈ ಪುಟ್ಟ ಬಾಲಕಿಯನ್ನು ಗಮನಿಸಿದ ಹಿಮಾಚಲ ಪ್ರದೇಶದ ಧರ್ಮಶಾಲಾ ಮೂಲದ ದತ್ತಿ ಸಂಸ್ಥೆಯೊಂದರ ನಿರ್ದೇಶಕರಾಗಿದ್ದ ಟಿಬೆಟ್ ಸನ್ಯಾಸಿ ಲೊಬ್ಸೆಂಗ್ ಜಮ್ಯಾಂಗ್ ವಿದ್ಯಾಭ್ಯಾಸ ನೀಡಲು ಮುಂದಾಗಿದ್ದಾರೆ.
ಈ ಕುರಿತು ಮಗುವನ್ನು ನಿರಾಶ್ರಿತರ ಶಿಬಿರಕ್ಕೆ ಸೇರಿಸುವಂತೆ ಲೊಬ್ಸೆಂಗ್ ಜಮ್ಯಾಂಗ್ ಆಕೆಯ ಪೋಷಕರಲ್ಲಿ ಕೇಳಿಕೊಂಡಿದ್ದರು. ಆದರೆ ಆಕೆಯ ತಂದೆ ಕಾಶ್ಮೀರಿ ಲಾಲ್ ರ ಮನವೊಲಿಸುವುದು ಸುಲಭವಾಗಿರಲಿಲ್ಲ. ಸತತ ಪ್ರಯತ್ನದ ಬಳಿಕ ಕೊನೆಗೂ ಆಕೆಗೆ ಶಿಕ್ಷಣ ಕೊಡಿಸಲು ಕಾಶ್ಮೀರಿ ಲಾಲ್ ಒಪ್ಪಿಕೊಂಡರು.

- Advertisement -


ಬಳಿಕ ಅಧ್ಯಯನದಲ್ಲಿ ಸದಾ ಮುಂದಿದ್ದ ಪಿಂಕಿ, ತನ್ನ ಪಿಯುಸಿ ಪೂರ್ಣಗೊಳಿಸಿದ ನಂತರ, NEET ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಭೇದಿಸಿದ್ದರು. 2018 ರಲ್ಲಿ ಚೀನಾದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದು ಈಗ MBBS ಪದವಿಯನ್ನು ಪೂರ್ಣಗೊಳಿಸಿದ್ದಾರೆ.



Join Whatsapp