ಅಗ್ನಿವೀರರಿಗೆ ಉದ್ಯೋಗ ಎಂಬುದು ‘ಮಹೇಂದ್ರ’ ಗಿಮಿಕ್: ನಾನಿನ್ನೂ ನಿರುದ್ಯೋಗಿ ಎಂದು ಟ್ವೀಟ್ ಮಾಡಿದ ಮಾಜಿ ನೌಕಾಧಿಕಾರಿ

Prasthutha|

ನವದೆಹಲಿ: ಅಗ್ನಿಪಥ್ ಯೋಜನೆಯ ಮೂಲಕ ನಾಲ್ಕು ವರ್ಷಗಳ ಕಾಲ ಸೇವೆಗೈದು ಮರಳುವ ಅಗ್ನಿವೀರರಿಗೆ ಮಹೇಂದ್ರ ಕಂಪನಿಯಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ಮಹೇಂದ್ರ ಕಂಪನಿ ಸಂಸ್ಥಾಪಕ ಆನಂದ್ ಮಹೇಂದ್ರ ಘೋಷಣೆ ಮಾಡಿದ್ದರು.

- Advertisement -

ಆದರೆ ಅದಕ್ಕೆ ಟಕ್ಕರ್ ಕೊಡುವಂತೆ ಮಾಜಿ ನೌಕಾಸೇನೆಯ ಇಂಜಿನಿಯರ್ ಅಭಿಶೇಕ್ ಕುಮಾರ್ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದು ನೌಕೆಯಲ್ಲಿ ನಾವಿಕ ಇಂಜಿನಿಯರ್ ಆಗಿದ್ದ ನಾನು ಕಳೆದ 2017 ಜುಲೈ 17 ಕ್ಕೆ ವಿರಮಿಸಿದ್ದೇನೆ. ಆ ಬಳಿಕ ಮಹೇಂದ್ರ ಕಂಪನಿಗೆ ಉದ್ಯೋಗಕ್ಕೆ ಮನವಿ ಮಾಡಿದ್ದು ಇದುವರೆಗೂ ನನಗೆ ಪ್ರತಿಕ್ರಿಯೆ ದೊರಕಿಲ್ಲ ಮತ್ತು ನಾನು ಕಳೆದ ಐದು ವರ್ಷಗಳಿಂದ ನಿರುದ್ಯೋಗಿಯಾಗಿಯೇ ಇದ್ದೇನೆ. ಆದರೆ ಈಗ ಆಕಸ್ಮಿಕವಾಗಿ ಮಹೇಂದ್ರ ಕಂಪನಿಯು ಅಗ್ನಿವೀರರಿಗೆ ಉದ್ಯೋಗ ಘೋಷಿಸಿದ್ದು ಹಾಸ್ಯಾಸ್ಪದ ಎಂದು ಟ್ವೀಟ್ ನಲ್ಲಿ‌ ಹಂಚಿಕೊಂಡಿದ್ದಾರೆ.

ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದ್ದು ಅದನ್ನು ತಣ್ಣಗಾಗಿಸುವ ಪ್ರಯತ್ನ ಕೇಂದ್ರ ಸರಕಾರವು ವಿವಿಧ ದಿಕ್ಕಿನಲ್ಲಿ‌ ಮಾಡುತ್ತಿತ್ತು. ಅದರ ಭಾಗವಾಗಿ ಅಸ್ಸಾಂ ರೈಫಲ್ಸ್ ನಲ್ಲಿ ಅಗ್ನಿವೀರರಿಗೆ10% ಮೀಸಲಾತಿಯನ್ನೂ ವಾಗ್ದಾನ ಮಾಡಿತ್ತು. ಜೊತೆಗೆ ಮಹೇಂದ್ರ ಕಂಪನಿಯ ಸಂಸ್ಥಾಪಕ ಉದ್ಯೋಗ ನೀಡುವುದಾಗಿ ಆಶ್ವಾಸನೆ ನೀಡಿದ್ದು ಅದು ಬರೀ ಗಿಮಿಕ್ ಎಂದು ನೌಕಾಪಡೆಯ ಮಾಜಿ‌ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ.

Join Whatsapp