ಬೆಂಗಳೂರು: ಮುಖ್ಯಮಂತ್ರಿಗಳ ‘ದಲಿತರ ಮನೆಯ ಊಟ’ ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ ಎಂದು ಹೇಳಿದೆ.
ಸಿ ಎಂ ಬೊಮ್ಮಾಯಿಯವರೇ ದಲಿತರನ್ನು ಅವಮಾನಿಸಲೆಂದೇ ದಲಿತರ ಮನೆಗೆ ಹೋದಿರಾ?
ಬಿಜೆಪಿಗೆ ದಲಿತರೆಂದರೆ ಅಷ್ಟೊಂದು ಅನುಮಾನವೇ ಎಂದು ಪ್ರಶ್ನಿಸಿದೆ.
ದಲಿತರ ಮನೆಯಲ್ಲಿ ಊಟ ಪ್ರಹಸನ; ಸಂಘಪರಿವಾರದ ಅಸಲಿ ಮನಸ್ಥಿತಿಯ ಅನಾವರಣ: ಕಾಂಗ್ರೆಸ್
Prasthutha|