“ನನ್ನ ಸುರಕ್ಷತೆಯ ಬಗ್ಗೆ ಕುಟುಂಬ ಚಿಂತಿತವಾಗಿದೆ”: ವಾರಣಾಸಿ ಮಸೀದಿ ಪ್ರಕರಣದ ನ್ಯಾಯಾಧೀಶ ರವಿಕುಮಾರ್ ದಿವಾಕರ್

Prasthutha|

ಲಕ್ನೋ: ಜ್ಞಾನವಾಪಿ ಮಸೀದಿಯೊಳಗೆ ಚಿತ್ರೀಕರಣಕ್ಕೆ ಅನುಮತಿ ನೀಡಿದ ವಾರಣಾಸಿ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ, “ಸಾಮಾನ್ಯ ಸಿವಿಲ್ ವಿಷಯವನ್ನು ಅಸಾಧಾರಣ ಸಮಸ್ಯೆಯಾಗಿ ಪರಿವರ್ತಿಸಿರುವುದರಿಂದ ಅವರ ಕುಟುಂಬವು ತಮ್ಮ ಸುರಕ್ಷತೆಯ ಬಗ್ಗೆ ತೀವ್ರವಾಗಿ ಚಿಂತಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ವಾರಣಾಸಿಯ ಕೆಳ ನ್ಯಾಯಾಲಯಗಳ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ತಮ್ಮ ತೀರ್ಪಿನಲ್ಲಿ ಹೀಗೆ ಬರೆದಿದ್ದಾರೆ: “ಈ ಸರಳ ಸಿವಿಲ್ ಪ್ರಕರಣವನ್ನು ಅಸಾಮಾನ್ಯ ಪ್ರಕರಣವನ್ನಾಗಿ ಮಾಡುವ ಮೂಲಕ ಭಯದ ವಾತಾವರಣವನ್ನು ನಿರ್ಮಿಸಲಾಗಿದೆ. ನನ್ನ ಕುಟುಂಬವು ಯಾವಾಗಲೂ ನನ್ನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಅವರ ಸುರಕ್ಷತೆಯ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಸುರಕ್ಷತೆಯ ಬಗ್ಗೆ ನನ್ನ ಪತ್ನಿ ಪದೇ ಪದೇ ಆತಂಕ ವ್ಯಕ್ತಪಡಿಸುತ್ತಾಳೆ. ನಾನು ಮನೆಯಿಂದ ಹೊರಗಿದ್ದೇನೆ” ಎಂದು ವಾರಣಾಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು  ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆಯನ್ನು ಮುಂದುವರೆಸುವಂತೆ ಆದೇಶಿಸಿದರು. ಅರ್ಜಿದಾರರು ಕೇಳಿದಂತೆ ಜ್ಞಾನವಾಪಿ ಮಸೀದಿಯೊಳಗೆ ಎಲ್ಲಾ ಸ್ಥಳಗಳಲ್ಲಿ ವೀಡಿಯೊಗ್ರಫಿ ಮಾಡಬಹುದು ಮತ್ತು ಮೇ 17 ರೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಗುರುವಾರ ತನ್ನ ಆದೇಶದಲ್ಲಿ ತಿಳಿಸಿದೆ



Join Whatsapp