ಮತಾಂತರ ನಿಷೇಧದ ಕರಡು ಉ. ಪ್ರ , ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯದ ಪಡಿಯಚ್ಚಿನಂತಿದೆ: ಮಹತ್ವದ ಅಂಶ ಬಹಿರಂಗಪಡಿಸಿದ ಸಿದ್ದರಾಮಯ್ಯ

Prasthutha|

ಎಲ್ಲವನ್ನೂ ಬರೆದವರ “ಮೂಲ” ಒಂದೇನಾ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ

- Advertisement -

ಬೆಳಗಾವಿ: ಕರ್ನಾಟಕ ವಿಧಾನಸಭೆ ಮತಾಂತರ ನಿಷೇಧ ವಿಧೇಯಕದ ಬಗ್ಗೆ ಚರ್ಚೆಯ ವೇಳೆ ಸದನವನ್ನುದ್ದೇಶಿಸಿ ಮಾತನಾಡಿದ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಜಾರಿಗೆ ತರಲು ಮುಂದಾಗುತ್ತಿರುವ ಈ ಕಾಯ್ದೆಯ ಕರಡು ಪ್ರತಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಕಾಯ್ದೆಗಳ ಪಡಿಯಚ್ಚಿನಂತಿದೆ. ಕೆಲವೊಂದು ಅಂಶಗಳನ್ನು ಓದಿ ಹೇಳಿದ ಸಿದ್ದರಾಮಯ್ಯನವರು ಇದೇ ಅಂಶಗಳು ಆ ರಾಜ್ಯಗಳ ಕಾಯ್ದೆಯಲ್ಲೂ ಇದೆ. ಈ ಮೂರು ರಾಜ್ಯಗಳ ಕರಡು ಪ್ರತಿ ರಚಿಸದವರೇ ಕರ್ನಾಟಕದ ಕಾಯ್ದೆಯ ಕರಡನ್ನು ರಚಿಸಿರುವ ಶಂಕೆಯಿದೆ. ಹಾಗಾದರೆ ಪಡಿಯಚ್ಚಿನಂತಿರುವ ನಾಲ್ಕು ರಾಜ್ಯಗಳ ಕರಡು ಪ್ರತಿಯನ್ನು ರಚಿಸಿದವರು ಯಾರು ? ಇವೆಲ್ಲದರ ಮೂಲ ಒಂದೇನಾ ಎಂದವರು ಪ್ರಶ್ನಿಸಿದರು.

ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ಕರಡು ಪ್ರತಿ ರಚಿಸಿದ ಕಾಣದ ಕೈಗಳು ಕರ್ನಾಟಕದಲ್ಲಿ ಜಾರಿಗೆ ತರುತ್ತಿರುವ ಕಾಯ್ದೆಯಲ್ಲಿ ಕೆಲಸಮಾಡಿದಂತಿದೆ ಎಂದವರು ಹೇಳಿದ್ದಾರೆ. ಸಂವಿಧಾನದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲದಿರುವಾಗ ನೂತನ ಕಾಯ್ದೆ ರಾಜ್ಯಕ್ಕೆ ಅಗತ್ಯವಿದೆಯೇ ಎಂದು ಸದನದಲ್ಲಿ ಪ್ರಶ್ನಿಸಿ ಗಮನ ಸೆಳೆದರು.

Join Whatsapp