ಫಾರೂಕಿಯಾ ಕಾಲೇಜಿಗೆ ಬೀಗ ಹಾಕಿ ವಿದ್ಯಾರ್ಥಿನಿಯರನ್ನು ಬೀದಿಗೆ ತಳ್ಳಿದ ಜಿಲ್ಲಾಡಳಿತದ ನಡೆ ಖಂಡನೀಯ; ಕ್ಯಾಂಪಸ್ ಫ್ರಂಟ್

Prasthutha|

ಮೈಸೂರು: ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಮೈಸೂರಿನ ಫಾರೂಕಿಯಾ ಕಾಲೇಜಿಗೆ ಬೀಗ ಜಡಿದು ವಿದ್ಯಾರ್ಥಿನಿಯರನ್ನು ಬೀದಿಪಾಲು ಮಾಡಿರುವ ಮೈಸೂರು ಜಿಲ್ಲಾಡಳಿತದ ನಡೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮೈಸೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ.

- Advertisement -

ಕಾಲೇಜು ಆಡಳಿತ ಮಂಡಳಿಯ ಬೇಜವಾಬ್ದಾರಿ ವರ್ತನೆಗೆ ವಿದ್ಯಾರ್ಥಿನಿಯರು ಹೊಣೆಗಾರರಲ್ಲ, ಕಾಲೇಜಿನ ಏನೇ ಸಮಸ್ಯೆ ಇದ್ದರೂ ಜಿಲ್ಲಾಡಳಿತ ಮುಗಿಸಬೇಕಾಗಿತ್ತು. ಆದರೆ ಕಾಲೇಜಿಗೆ ಬೀಗ ಜಡಿದು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಸುಮಾರು 400 ಕ್ಕೂ ಮಿಕ್ಕ ವಿದ್ಯಾರ್ಥಿನಿಯರನ್ನು ಬೀದಿಗೆ ತಳ್ಳುವುದು ಜಿಲ್ಲಾಡಳಿತಕ್ಕೆ ಶೋಭೆ ತರುವಂತಹದಲ್ಲ. ತಕ್ಷಣ ಜಿಲ್ಲಾಡಳಿತ ಸಮಸ್ಯೆಗೆ ಪರಿಹಾರ ಕಂಡುಕೊಂಡು ಕಾಲೇಜನ್ನು ಯಥಾಸ್ಥಿತಿ ಮುಂದುವರೆಸಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಯಾವುದೇ ಅಡ್ಡಿಬರದಂತೆ ನೋಡಿಕೊಳ್ಳಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮೈಸೂರು ಜಿಲ್ಲಾಧ್ಯಕ್ಷ ಫೈಝಾನ್ ಆಗ್ರಹಿಸಿದ್ದಾರೆ.

Join Whatsapp