ನರ್ಸ್ ತೋಳಿನಿಂದ ಜಾರಿ ಬಿದ್ದ ನವಜಾತ ಶಿಶು ಸಾವು

Prasthutha|

ಲಕ್ನೋ: ನರ್ಸ್ ತೋಳಿನಿಂದ ಜಾರಿ ಬಿದ್ದು ನವಜಾತ ಶಿಶು ಸಾವನ್ನಪ್ಪಿರುವ ಘಟನೆ ನಗರದ ಚಿನ್ಹಾಟ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

- Advertisement -

ಹೆರಿಗೆಯಾದ ಬಳಿಕ ನರ್ಸ್ ಮಗುವನ್ನು ಟವೆಲ್ ನಲ್ಲಿ ಸುತ್ತಿಕೊಂಡು ಮೇಲಕ್ಕೆತ್ತಿದ್ದು, ಆಯತಪ್ಪಿ ಮಗು ಜಾರಿ ನೆಲಕ್ಕೆ ಬಿದ್ದಿದೆ.

ಇದನ್ನು ಕಂಡು ಮಗುವಿನ ತಾಯಿ ಕಿರುಚಾಡಲು ಆರಂಭಿಸಿದ್ದು, ಈ ಶಬ್ಧ ಕೇಳಿ ಮನೆಯವರು ಲೇಬರ್ ರೂಮ್ ಗೆ ಹೋಗಲು ಪ್ರಯತ್ನಿಸಿದರು. ಈ ವೇಳೆ ಆಸ್ಪತ್ರೆ ಅಧಿಕಾರಿಗಳು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ಮಗು ಆರೋಗ್ಯವಾಗಿ ಜನಿಸಿದೆಯೇ ಎಂಬುವುದನ್ನು ತಿಳಿದುಕೊಳ್ಳಲು ಕುಟುಂಬಸ್ಥರು ಕೊಠಡಿಗೆ ನುಗ್ಗಿದ್ದಾರೆ. ಈ ವೇಳೆ ಕೆಳಗೆ ಬಿದ್ದಿದ್ದ ಮಗುವನ್ನು ನರ್ಸ್ ಒಂದು ಕೈಯಲ್ಲಿ ಹಿಡಿದುಕೊಂಡಿರುವುದನ್ನು ನೋಡಿದ್ದಾರೆ.

- Advertisement -

ಮಗು ಸತ್ತಿದ್ದರೂ, ಮಗು ಬದುಕಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಸುಳ್ಳನ್ನು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕುಟುಂಬಸ್ಥರು ಚಿನ್ಹತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ  ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ ಮಗುವಿನ ತಲೆಯ ಮೇಲೆ ಗಾಯದ ಗುರುತಿರುವುದು ಬಹಿರಂಗಗೊಂಡಿದೆ.

Join Whatsapp