ದಾಂಪತ್ಯಕ್ಕಿಂತ ದೇಶ ದೊಡ್ಡದು: ಮದುವೆಯಾದ ಮರುದಿನವೇ ಗನ್ ಹಿಡಿದು ಉಕ್ರೇನ್ ರಕ್ಷಣೆಗೆ ನಿಂತ ಜೋಡಿ !

Prasthutha|

ಕೀವ್: ರಷ್ಯಾವು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದೆ. ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ಆತಂಕದ ಮಧ್ಯೆ ಕೀವ್ ನಲ್ಲಿ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿವೊಂದು ಇದೀಗ ದೇಶ ರಕ್ಷಣೆಗೆ ಕೈಯಲ್ಲಿ ಗನ್ ಹಿಡಿದು ನಿಂತಿದೆ.

- Advertisement -

ಕೀವ್ ನಲ್ಲಿ 21 ವರ್ಷದ ಅರಿವಾ ಹಾಗೂ 24 ವರ್ಷದ ಸ್ವಾಟೋಪ್ಲಾವ್ ಫರ್ಸಿವ್ ನಿನ್ನೆ ವಿವಾಹವಾಗಿದ್ದರು. ಇದರ ಬೆನ್ನಲ್ಲೇ ಇದೀಗ ದೇಶ ರಕ್ಷಣೆಗೆ ಮುಂದಾಗಿದ್ದು, ಕೈಯಲ್ಲಿ ಗನ್ ಹಿಡಿದು ಎದುರಾಳಿಗಳ ವಿರುದ್ಧ ಹೋರಾಡಲು ಮುಂದಾಗಿದ್ದಾರೆ. ರಷ್ಯಾ ಮಿಲಿಟರಿ ಪಡೆಗಳು ಈಗಾಗಲೇ ಉಕ್ರೇನ್ ನಲ್ಲಿ ಕಾಲಿಟ್ಟಿರುವ ಕಾರಣ ಪರಿಸ್ಥಿತಿ ಕೈಮೀರಿ ಹೋಗಿದ್ದು, ಇದರ ಹೊರತಾಗಿ ಕೂಡ ಅಲ್ಲಿನ ಸೈನಿಕರು ದಿಟ್ಟತನದಿಂದಲೇ ಹೋರಾಟ ಮುಂದುವರೆಸಿದ್ದಾರೆ.



Join Whatsapp