ಮಂಗಳೂರು: ಬ್ಯಾಂಕ್ SMS ಎಂದು ನಂಬಿ ಮೋಸ ಹೋದ ಗ್ರಾಹಕ

Prasthutha: June 16, 2021

ಮಂಗಳೂರು: ಬ್ಯಾಂಕ್​ ಹೆಸರಿನಲ್ಲಿ ಬಂದ ಸಂದೇಶವನ್ನು ಕ್ಲಿಕ್ ಮಾಡಿದಕ್ಕೆ ವ್ಯಕ್ತಿಯೊಬ್ಬರು 65 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಕೂಡಲೇ ಆ ವ್ಯಕ್ತಿ ನಗರದ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ನಗರದ ನಿವಾಸಿಯೊಬ್ಬರು ಆರ್ಯ ಸಮಾಜ ರಸ್ತೆಯಲ್ಲಿ ಇರುವ ಎಸ್​ಬಿಐ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದರು. ಇವರಿಗೆ ಜೂನ್ 13 ರಂದು ರಾತ್ರಿ ಮೊಬೈಲ್​ಗೆ ಎಸ್​ಎಂಎಸ್ ಬಂದಿತ್ತು. ಇದರಲ್ಲಿ verify important message from SBI ಎಂದು ಒಂದು ಲಿಂಕ್ ಕಳುಹಿಸಲಾಗಿತ್ತು. ಈ ಲಿಂಕ್ ತೆರೆದಾಗ ಎಸ್​ಬಿಐ ಬ್ಯಾಂಕ್​ನ ಪೇಜ್ ಓಪನ್ ಆಗಿತ್ತು.

ಅರ್ಜಿದಾರರಿಗೆ ಯೂಸರ್ ನೇಮ್, ಪಾಸ್ ವರ್ಡ್ ತುಂಬಲು ತಿಳಿಸಿದ ನಂತರ OTP ವಿವರ ಪಡೆದುಕೊಂಡು ರೂ. 65 ಸಾವಿರ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಸೈಬರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!