ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ 54 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Prasthutha|

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು 54 ವರ್ಷ ಕಠಿಣ ಸಜೆ ಮತ್ತು 40 ಸಾವಿರ ರೂ. ದಂಡ ವಿಧಿಸಿದೆ.

- Advertisement -

ಕಾಸರಗೋಡು ಫಾಸ್ಟ್ ಟ್ರ್ಯಾಕ್ ವಿಶೇಷ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಎ.ವಿ.ಉನ್ನಿಕೃಷ್ಣನ್ ಅವರು ಎಚ್.ಗೋಪಾಲನ್ (59) ಎಂಬಾತನಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ.
ದಂಡ ಪಾವತಿಸದಿದ್ದಲ್ಲಿ ಎರಡು ವರ್ಷ ಕಠಿಣ ಸಜೆ ಅನುಭವಿಸಬೇಕಾಗುತ್ತದೆ.

ಘಟನೆ ನಡೆದಿದ್ದು 2020ರಲ್ಲಿ ನಡೆದ ಈ ಪ್ರಕರಣದ ತನಿಖೆಯನ್ನು ಆದೂರು ಪೊಲೀಸ್ ಇನ್ಸ್ ಪೆಕ್ಟರ್ ಪ್ರೇಮಸದನ್ ಕೈಗೊಂಡಿದ್ದರು. ಪ್ರಕರಣದ ಚಾರ್ಜ್ ಶೀಟ್ ಅನ್ನು ಇನ್ಸ್ ಪೆಕ್ಟರ್ ವಿ. ಕೆ ವಿಶ್ವಂಭರನ್ ಸಮರ್ಪಿಸಿದ್ದರು. ವಿವಿಧ POCSO ವಿಭಾಗಗಳಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ.

- Advertisement -

ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಎ.ಕೆ.ಪ್ರಿಯಾ ವಾದ ಮಂಡಿಸಿದ್ದರು.



Join Whatsapp