ನ್ಯಾಯಾಲಯವು ದೇಶದ ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ : ಹೈಕೋರ್ಟ್ ನ್ಯಾಯವಾದಿ ಗಂಭೀರ ಆರೋಪ

Prasthutha|

- Advertisement -

ಬೆಂಗಳೂರು: ನ್ಯಾಯಾಲಯವು ದೇಶದ ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ಹೈಕೋರ್ಟ್ ನ್ಯಾಯವಾದಿ ದಾನಪ್ಪ ಪಿ. ಗಂಭೀರ ಆರೋಪ ಮಾಡಿದ್ದಾರೆ.

ಸಚಿವರ ಸೆಕ್ಸ್ CD ವಿಚಾರವು ಸಮಾಜದ‌ ಶಾಂತಿ ಸುವ್ಯವಸ್ಥೆಗೆ ದಕ್ಕೆ ತರುತ್ತಿದೆ. ಹಾಗಾಗಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಸಿಡಿ ಬಿಡುಗಡೆ ಮಾಡಿರುವ ದಿನೇಶ್ ಕಲ್ಲಹಳ್ಳಿ ಇಬ್ಬರ ವಿರುದ್ಧವು ಪ್ರಕರಣ ದಾಖಲಿಸಬೇಕು ಇಲ್ಲವಾದಲ್ಲಿ  ಸರಕಾರ ತಕ್ಷಣ ಮಧ್ಯಪ್ರದೇಶಿಸಿ ಇಬ್ಬರ ವಿರುದ್ಧವೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ನ್ಯಾಯಾಲಯದ ವಿಚಾರಣೆಗೆ ನೀಡಬೇಕೆಂದು ಎಂ.ಹೆಚ್. ಚಂದ್ರಶೇಖರ್ ನೇತೃತ್ವದ ಹೈಕೋರ್ಟ್ ನ್ಯಾಯವಾದಿಗಳು ಆಗ್ರಹಿಸಿದ್ದಾರೆ.

- Advertisement -

ಇಂತಹಾ ಪ್ರಕರಣಗಳಿಂದಾಗಿ ನ್ಯಾಯಾಂಗದ ಮೇಲಿರುವ ನಂಬಿಕೆ ಕಳೆದುಕೊಳ್ಳುತ್ತಿದ್ದೇವೆ. ಈಗೀಗ ಪ್ರಬಲರಿಗೆ ಒಂದು ನ್ಯಾಯ, ದುರ್ಬಲರಿಗೆ ಒಂದು ನ್ಯಾಯವಾಗಿದೆ. ಭಾರತದಲ್ಲಿ ಶ್ರೀಮಂತರಿಗಾಗಿ ಪ್ರತ್ಯೇಕ ಕಾನೂನು ರಚಿಸುವ ಮೂಲಕ ಎಲ್ಲವನ್ನೂ ದುಡ್ಡಿನ ಮೇಲೆ ಅಳೆಯಲಾಗುತ್ತದೆ. ಇದೆಲ್ಲಾ ಪ್ರಭಾವಿ ವ್ಯಕ್ತಿಗಳನ್ನು ಬಚಾವ್ ಮಾಡಲು ಮಾಡುವ ಪ್ರಯತ್ನವಾಗಿದೆ.

ಕಲ್ಲಹಳ್ಳಿ ಕೇಸ್ ವಾಪಸು ತೆಗೆದು ಸಾರ್ವಜನಿಕರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಇದುವರೆಗೆ ವರದಿ ಬಿತ್ತರವಾದರೂ ಪ್ರಕರಣ ದಾಖಲಾಗಿಲ್ಲ.‌ ಎಫ್.ಐ.ಆರ್ ತಕ್ಷಣ ಆಗಬೇಕು. ‌ ರಾಜಕೀಯವಾಗಿ ಬಲಿಷ್ಠವಾಗಿದ್ದರೆ ಪ್ರಕರಣ ದಾಖಲಾಗುವುದಿಲ್ಲ ಎಂಬುವುದಕ್ಕೆ ಸಿಡಿ ಘಟನೆ ನಿದರ್ಶನವಾಗಿದೆ. ಬಡವರು ಒಂದಕ್ಷರ ಬರೆದರೂ ಅವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗುತ್ತೆ.‌ ಅರೋಪಿತರೇ ತನಿಖೆಗೆ ಆಗ್ರಹಿಸುವಾಗ ಸರಕಾರ ಯಾಕೆ ತನಿಖೆಗೆ ಮುಂದಾಗುತ್ತಿಲ್ಲ?  ಪೊಲೀಸರು ತಮ್ಮ ಕರ್ತವ್ಯದಲ್ಲಿ ಲೋಪ ಎಸಗುತ್ತಿದ್ದಾರೆ. ಸರಕಾರವು ಪೊಲೀಸ್ ಇಲಾಖೆಯ ಮೇಲೆ ಪ್ರಭಾವ ಹೇರುತ್ತಿದೆ.‌ ನ್ಯಾಯಾಲಯವು ದೇಶದ ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ದಾನಪ್ಪ ಪಿ ಆರೋಪಿಸಿದ್ದಾರೆ.



Join Whatsapp