ಬೆಂಗಳೂರು: 2023 ರ ವೇಳೆಗೆ ಸಿದ್ದರಾಮಯ್ಯರನ್ನು ಕಾಂಗ್ರೆಸ್ ನಿಂದ ಹೊರಗಿಡುತ್ತಾರೆ. ಈಗಾಗಲೇ ಅದಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮುಳುಗಿ ಹೋಗಿದೆ. ನೆಕ್ಸ್ಟ್ ಟಾರ್ಗೆಟ್ ಸಿದ್ದರಾಮಯ್ಯ. ರಾಮಕೃಷ್ಣ ಹೆಗಡೆ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. 1994ರಲ್ಲಿ ಆಗಿದ್ದು 2023 ಡಿಸೆಂಬರ್ ನಲ್ಲಿ ಮರುಕಳಿಸುತ್ತದೆ 2023ಕ್ಕೆ ಸಿದ್ದರಾಮಯ್ಯರನ್ನು ಪಾರ್ಟಿಯಿಂದಲೇ ಸಸ್ಪೆಂಡ್ ಮಾಡಿಸುತ್ತಾರೆ ಎಂದು ಹೇಳಿದರು.
ಪಿಎಸ್ ಐ ನೇಮಕ ಅಕ್ರಮ ಪ್ರಕರಣದ ಬಗ್ಗೆ ಕಾಂಗ್ರೆಸ್ ಯಾವುದೇ ಆಧಾರವಿಲ್ಲದೆ ನಿರಂತರ ಆರೋಪ ಮಾಡುತ್ತಿದೆ. ಊಹಾಪೋಹದ ಹೇಳಿಕೆ ನೀಡುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದು, ಅಧಿಕಾರಕ್ಕೆಬರಲ್ಲ ಎಂಬ ಭಯದಿಂದ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.