ನವದೆಹಲಿ: ಗ್ರಾಹಕರಿಗೆ ಮತ್ತೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ವಾಣಿಜ್ಯ ಸಿಲಿಂಡರ್ ದರದಲ್ಲಿ ದಾಖಲೆಯ 266 ರೂ. ಹೆಚ್ಚಿಸಲಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಂದಿನಿಂದ 266 ರೂಪಾಯಿ ಹೆಚ್ಚಳವಾಗಿದ್ದು 19 ಕೆಜಿ ಸಿಲೆಂಡರ್ ಗೆ 2 ಸಾವಿರ ರೂಪಾಯಿ 50 ಪೈಸೆ ನೀಡಬೇಕಾಗಿದೆ. ಈ ಹಿಂದೆ ಅದರ ಬೆಲೆ 1,734 ರೂಪಾಯಿಯಾಗಿತ್ತು. ಆದರೆ ಸದ್ಯಕ್ಕೆ ಗೃಹ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗಿಲ್ಲ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳದಿಂದ ಹೊಟೇಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆ, ಬೇಕರಿಗಳಲ್ಲಿನ ತಿಂಡಿ-ತಿನಿಸುಗಳಲ್ಲಿ ಸಹ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.ಅಂತಿಮವಾಗಿ ಬಡವರು ಮತ್ತು ಮಧ್ಯಮ ವರ್ಗಕ್ಕೆ ಇದರ ಬಿಸಿ ತಟ್ಟಲಿದೆ.