ನವದೆಹಲಿ: ಜಾಗತಿಕ ಸುದ್ದಿ ಸಂಸ್ಥೆಯಾಗಿರುವ ರಾಯಿಟರ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಡ್ಯಾನಿಶ್ ಸಿದ್ದೀಖಿ ಅವರ ಮಕ್ಕಳು ತಂದೆಯ ಪರವಾಗಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಶುಕ್ರವಾರ ಸ್ವೀಕರಿಸಿದ್ದಾರೆ.
ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದೀಖಿ ಅವರ ಮಕ್ಕಳಾದ ಯೂನಸ್ ಸಿದ್ದಿಕಿ (6) ಮತ್ತು ಸಾರಾ ಸಿದ್ದಿಕಿ (4) ನ್ಯಾಯಾರ್ಕ್ ನಲ್ಲಿ ತಮ್ಮ ತಂದೆಯ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.
ಭಾರತದಲ್ಲಿ ಕೊರೊನಾ ಸಂಕಷ್ಠದ ಚಿತ್ರಗಳಿಗಾಗಿ ರಾಯಿಟರ್ಸ್ ಪತ್ರಕರ್ತರಾದ ಅದ್ನಾನ್ ಅಬಿದಿ, ಅಮಿತ್ ದೇವ್, ಡ್ಯಾನಿಶ್ ಸಿದ್ದೀಖಿ ಮತ್ತು ಸನ್ನಾ ಇರ್ಷಾದ್ ಮಟ್ಟೂ ಅವರುಗಳು ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
38ರ ಹರೆಯದ ಡ್ಯಾನಿಶ್ ಸಿದ್ದೀಖಿ ಕಳೆದ ವರ್ಷ ಜುಲೈನಲ್ಲಿ ಅಫ್ಘಾನಿಸ್ತಾನಕ್ಕೆ ವರದಿಗೆಂದು ತೆರಳಿದ್ದಾಗ, ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಘರ್ಷಣೆಯ ವೇಳೆ ಕೊಲ್ಲಲ್ಪಟ್ಟಿದ್ದರು.