ಕೊರೊನಾ ಹೆಚ್ಚಳ | ಒಂದು ವಾರ ಕಾದು ನೋಡಿ ಕಠಿಣ ಕ್ರಮ : ಲಾಕ್ ಡೌನ್ ಸುಳಿವು ಕೊಟ್ಟ ಸಿಎಂ

Prasthutha|

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತೀವ್ರವಾಗಿ ಹರಡುತ್ತಿರುವುದರಿಂದ ಒಂದು ವಾರ ಕಾದು ನೋಡಿ ಕೊರೊನಾ ಪ್ರಕರಣಗಳ ಸಂಖ್ಯೆ ನೋಡಿಕೊಂಡು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

- Advertisement -

ಕೊರೊನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ವಿಧಿಸಿದ್ದೇವೆ. ಜನರು ಸಹಕರಿಸದಿದ್ದರೆ ಲಾಕ್‌ಡೌನ್ ಮಾಡುವುದು ಅನಿವಾರ್ಯವಾಗುತ್ತದೆ. ಲಾಕ್​ಡೌನ್ ಮಾಡಿದರೆ ನಾಗರಿಕರಿಗೆ ತೊಂದರೆ ಆಗುತ್ತದೆ. ಲಾಕ್​ಡೌನ್​ನಿಂದ ಆದ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ದಯವಿಟ್ಟು ಸಾರ್ವಜನಿಕರು ಕೊರೊನಾ ಗೈಡ್‌ಲೈನ್ಸ್ ಪಾಲಿಸಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.

ಲಾಕ್​ಡೌನ್ ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ಆದರೆ ಇನ್ನು ಕೆಲ ದಿನ ಕಾದು ನೋಡಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಇದ್ದರೆ ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು . ಲಾಕ್​ಡೌನ್ ಅಗತ್ಯವಿಲ್ಲವೆಂದು ತಜ್ಞರು ಸಲಹೆ ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ವಿಪಕ್ಷದವರು ಯಾವುದೇ ಸಲಹೆ ನೀಡಿದರೂ ಸ್ವೀಕಾರ ಮಾಡ್ತೀವಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.



Join Whatsapp