ಶ್ರೀಕಾಕುಳಂ : ಆಂಧ್ರಪ್ರದೇಶದಲ್ಲಿ ಅಸಾನಿ ಚಂಡಮಾರುತದ ಸುದ್ದಿಯ ನಡುವೆ, ” ತೇಲಿ ಬಂದ ಚಿನ್ನದ ರಥ” ಆಂಧ್ರಪ್ರದೇಶದ ಶ್ರೀಕಾಕುಳಂನ ದಡವನ್ನು ತಲುಪಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗಿದ್ದು ಅದರಲ್ಲಿ ಜನರು ಸಮುದ್ರದಿಂದ ದಡಕ್ಕೆ ರಥವನ್ನು ಎಳೆಯುವ ದೃಶ್ಯ ಕಂಡುಬರುತ್ತಿದೆ.
ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಅನೇಕ ಜನರು ಈ ವೀಡಿಯೊವನ್ನು ಹಂಚಿಕೊಂಡಿದ್ದು ಚಿನ್ನದಿಂದ ಮಾಡಿದ ರಥವು ಸಾಗರದಲ್ಲಿ ತೇಲಿ ಬಂದಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಅನೇಕ ವಿಶ್ವಾಸಾರ್ಹ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡಿದ್ದು ಮೇ 10 ರಂದು ಶ್ರೀಕಾಕುಳಂ ಕಡಲತೀರದಲ್ಲಿ ನಿಗೂಢವಾದ ಚಿನ್ನದ ಬಣ್ಣದ ರಥವು ದಡಕ್ಕೆ ಕೊಚ್ಚಿಹೋಯಿತು ತಲೆಬರಹ ಕೊಟ್ಟಿದೆ.
ಚಿನ್ನದ ಬಣ್ಣದ ರಥವನ್ನು ಸ್ಥಳೀಯರು ಸಮುದ್ರ ತೀರಕ್ಕೆ ಎಳೆದೊಯ್ಯುತ್ತಿರುವುದನ್ನು ತೋರಿಸಲಾಗಿದ್ದು ಆದಾಗ್ಯೂ, ರಥವನ್ನು ಚಿನ್ನದಿಂದ ತಯಾರಿಸಲಾಗಿದೆ ಎಂದು ಎಲ್ಲಿಯೂ ವರದಿಯಾಗಿಲ್ಲ.
ರಥವು ಒಂದು ಮಠದ ಆಕಾರದಲ್ಲಿದ್ದು ಬಹುಶಃ ಅದು ಥೈಲ್ಯಾಂಡ್ ಅಥವಾ ಮ್ಯಾನ್ಮಾರ್ ನಿಂದ ತೇಲಿ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಿರಬಹುದು ಎಂದು ಅಂದಾಜಿಸಲಾಗಿದೆ.
ಶ್ರೀಕಾಕುಳಂ ಜಿಲ್ಲೆಯ ಕಲೆಕ್ಟರ್ ಐಎಎಸ್ ಅಧಿಕಾರಿ ಶ್ರೀಕೇಶ್ ಬಿ ಲತಾಕರ್ ಅವರು ರಥವನ್ನು ಚಿನ್ನದಿಂದ ತಯಾರಿಸಲಾಗಿಲ್ಲ ಆದರೆ ಚಿನ್ನದ ಬಣ್ಣದಲ್ಲಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ರಥವು ಈಗ ಸ್ಥಳೀಯ ಪೊಲೀಸರ ವಶದಲ್ಲಿದೆ” ಎಂದು ಹೇಳಿದ್ದಾರೆ.
ಶ್ರೀಕಾಕುಳಂನ ತೆಕ್ಕಲಿ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಎಂ.ವೆಂಕಟ ಗಣೇಶ್ ತನಿಖೆಯ ನಂತರ ಪೊಲೀಸರು ರಥದಲ್ಲಿ ಚಿನ್ನದಂತಹ ಯಾವುದೇ ಬೆಲೆಬಾಳುವ ಲೋಹವನ್ನು ಕಂಡುಹಿಡಿಯಲಿಲ್ಲ ಎಂದು ಹೇಳಿದ್ದು ಇದನ್ನು ಉಕ್ಕು ಮತ್ತು ಮರದಿಂದ ತಯಾರಿಸಲಾಗಿದೆ ಎಂದು ಹೇಳಿದ್ದಾರೆ.