₹96,238 ಕೋಟಿ ಮೌಲ್ಯದ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಆರಂಭಿಸಿದ ಕೇಂದ್ರ ಸರಕಾರ

Prasthutha|

ನವದೆಹಲಿ: ಕೇಂದ್ರ ಸರ್ಕಾರ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯನ್ನು ಇಂದು ಆರಂಭಿಸಿದೆ. ಇದರ ಒಟ್ಟು ಮೌಲ್ಯ ₹96,238 ಕೋಟಿ ಆಗಿದೆ.

- Advertisement -

ಮೊದಲ ದಿನವೇ ಭಾರ್ತಿ ಏರ್‌ಟೆಲ್‌ ರಿಲಯನ್ಸ್‌ ಜಿಯೊ ಹಾಗೂ ವೊಡಾಫೋನ್ ಐಡಿಯಾ ಕಂಪನಿಯು ಬಿಡ್‌ ಸಲ್ಲಿಕೆ ಮಾಡಿವೆ.

ಪ್ರಸ್ತುತ ದೇಶದಲ್ಲಿ ಇರುವ ದೂರಸಂಪರ್ಕ ಸೇವೆಯ ಅಭಿವೃದ್ಧಿ ಮತ್ತು ಮತ್ತಷ್ಟು ವಿಸ್ತರಣೆಗೆ ಈ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಸೇವೆ ನೀಡುವುದೇ ಇದರ ಹಿಂದಿರುವ ಉದ್ದೇಶವಾಗಿದೆ’ ಎಂದು ಸರ್ಕಾರ ತಿಳಿಸಿದೆ.

- Advertisement -

ಮಾರ್ಚ್‌ 8ರಂದು ಕೇಂದ್ರ ದೂರಸಂಪರ್ಕ ಇಲಾಖೆಯು ತರಂಗಾಂತರ ಹರಾಜು ಮತ್ತು ಹಂಚಿಕೆ ಕುರಿತ ಷರತ್ತುಗಳ ಬಗ್ಗೆ ಪ್ರಕಟಣೆ ಹೊರಡಿಸಿತ್ತು.

‘800 ಮೆಗಾ ಹರ್ಟ್ಜ್, 900 ಮೆಗಾ ಹರ್ಟ್ಜ್, 1,800 ಮೆಗಾ ಹರ್ಟ್ಜ್, 2,100 ಮೆಗಾ ಹರ್ಟ್ಜ್, 2,500 ಮೆಗಾ ಹರ್ಟ್ಜ್, 3,300 ಮೆಗಾ ಹರ್ಟ್ಜ್ ಹಾಗೂ 26 ಗೀಗಾ ಹರ್ಟ್ಜ್ ತರಂಗಾಂತರ ಬ್ಯಾಂಡ್‌ಗಳ ಹರಾಜು ನಡೆಯಲಿದೆ’ ಎಂದು ತಿಳಿಸಿದೆ.

3,300 ಮೆಗಾ ಹರ್ಟ್ಜ್ ಹಾಗೂ 26 ಗೀಗಾ ಹರ್ಟ್ಜ್ ತರಂಗಾಂತರವು 5ಜಿ ಸೇವೆ ಒದಗಿಸಲು ಸೂಕ್ತ ಬ್ಯಾಂಡ್‌ ಆಗಿವೆ.

ತರಂಗಾಂತರ ಖರೀದಿಗಾಗಿ ರಿಲಯನ್ಸ್ ಜಿಯೊ ಕಂಪನಿಯು ₹3 ಸಾವಿರ ಕೋಟಿ ಮೊತ್ತವನ್ನು ಠೇವಣಿ ಇಟ್ಟಿದೆ. ಹಾಗಾಗಿ, ಹೆಚ್ಚಿನ ಮೊತ್ತದ ಬಿಡ್‌ ಸಲ್ಲಿಕೆ ಮಾಡುವ ನಿರೀಕ್ಷೆಯಿದೆ. ಭಾರ್ತಿ ಏರ್‌ಟೆಲ್‌ ₹1,050 ಕೋಟಿ ಹಾಗೂ ವೊಡಾಫೋನ್ ಐಡಿಯಾ ₹300 ಕೋಟಿ ಠೇವಣಿ ಇಟ್ಟಿದೆ.

Join Whatsapp