ಜುನೈದ್, ನಾಸಿರ್ ಹತ್ಯೆಗೆ ಬಳಸಿದ ಕಾರು ಜಿಂದ್ ಜಿಲ್ಲಾ ಪರಿಷತ್ ನೋಂದಣಿಯದ್ದು: ಪೊಲೀಸರ ಹೇಳಿಕೆ

Prasthutha|

ಭಿವಾನಿ: ಜುನೈದ್ ಮತ್ತು ನಾಸಿರ್ ಹತ್ಯೆಗೆ ಬಳಸಿದ ಕಾರಿನ ನಂಬರ್ ಪ್ಲೇಟು ಜಿಂದ್ ಜಿಲ್ಲಾ ಪರಿಷತ್ ಹೆಸರಿನಲ್ಲಿ ನೋಂದಣಿಯಾಗಿದೆ. ಈಗಿನ ಅದರ ಮಾಲಿಕ ಯಾರು ಎನ್ನುವುದರ ಬಗ್ಗೆ ನಾವು ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಹಾಗೆ ಹುಡುಕಿದಾಗ ಸಲ್ಸಾರ್ ಟ್ರೇಡರ್ಸ್ ಎಂಬ ಹೆಸರು ಬಂತಾದರೂ ಅಂತಹ ಹೆಸರಿನ ಸಂಸ್ಥೆ ಆ ಪ್ರದೇಶದಲ್ಲಿ ಯಾವುದೂ ಇಲ್ಲ. ಹೆಚ್ಚುವರಿ ತನಿಖೆ ಮುಂದುವರಿದಿದೆ” ಎಂದು ಭರತ್ ಪುರ ಸೂಪರಿನ್ ಟೆಂಡೆಂಟ್ ಆಫ್ ಪೊಲೀಸ್ ಶ್ಯಾಂ ಸಿಂಗ್ ತಿಳಿಸಿದ್ದಾರೆ.

- Advertisement -


ತನಿಖೆಯಿಂದ ತಿಳಿದು ಬಂದುದೇನೆಂದರೆ ಜಿಲ್ಲಾ ಪಂಚಾಯತ್ ಆ ವಾಹನವನ್ನು ಕೆಲವು ತಿಂಗಳುಗಳ ಹಿಂದೆ ಹರಾಜು ಹಾಕಿದೆ. “ಜಿಂದ್ ಜಿಲ್ಲಾ ಪಂಚಾಯತ್ ಹೆಸರಿನಲ್ಲಿದೆ ಕಾರಿನ ನಂಬರ್ ಪ್ಲೇಟ್. ಆದರೆ ಅವರು ಆ ಕಾರನ್ನು ಹರಾಜು ಹಾಕಿದ್ದರು. ಆ ಹರಾಜಿನ ಬಗ್ಗೆ ಇನ್ನಷ್ಟು ವಿವರಗಳನ್ನು ನಾವು ಕಲೆ ಹಾಕುತ್ತಿದ್ಧೇವೆ” ಎಂದು ಭರತಪುರದ ಗೋಪಾಲಗಡ ಪೋಲೀಸು ಠಾಣೆಯ ಎಸ್ಎಚ್ಓ ರಾಂನರೇಶ್ ಮೀನಾ ಹೇಳಿದರು. ಜುನೈದ್ ನತ್ತು ನಾಸಿರ್ ಕೊಲೆಯ ಎಫ್’ಐಆರ್ ಇದೇ ಠಾಣೆಯಲ್ಲಿ ದಾಖಲಾಗಿದೆ.


ಜಿಂದ್ ಗೋಶಾಲೆಯಲ್ಲಿ ಕೆಲವು ದಿನಗಳ ಹಿಂದೆ ರಾಜಸ್ತಾನ ಪೊಲೀಸರು ಆ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾರಿನ ಸೀಟಿನಲ್ಲಿ ಕಂಡು ಬಂದ ರಕ್ತದ ಕಲೆಯ ಕೊಲೆಯಾದ ಇಬ್ಬರದ್ದಿರಬೇಕು ಎಂದು ಭರತ್ ಪುರ ಐಜಿ ಗೌರವ್ ಶ್ರೀವಾತ್ಸವ್ ಹೇಳಿದರು. ಈ ಮೊಕದ್ದಮೆಯಲ್ಲಿ ರಾಜಸ್ತಾನ ಪೊಲೀಸರು ವಶಪಡಿಸಿಕೊಂಡಿರುವ ಈ ಕಾರು ಮುಖ್ಯ ಸಾಕ್ಷಿಯಾಗಿದೆ.
ಫೆಬ್ರವರಿ 15ರಂದು ಜುನೈದ್ ಮತ್ತು ನಾಸಿರ್ ಕಾಣೆಯಾಗಿದ್ದರು. ಅವರ ಸುಟ್ಟು ಕರಕಲಾದ ದೇಹವು ಹರಿಯಾಣದ ಭಿವಾನಿಯಲ್ಲಿ ಮರುದಿನ ಪತ್ತೆಯಾಯಿತು. ಈ ದಾಳಿ ಕೊಲೆಯಲ್ಲಿ ಬಜರಂಗ ದಳದ ಸದಸ್ಯರು ಇರುವುದಾಗಿ ಕೊಲೆಯಾದವರ ಮನೆಯವರು ದೂರಿನಲ್ಲಿ ಹೇಳಿದ್ದಾರೆ.



Join Whatsapp