ಉತ್ತರದ ನಕಲು ಚೀಟಿಯನ್ನು ಪ್ರೇಮ ಪತ್ರವೆಂದು ಬಗೆದು ಬಾಲಕನ ಬರ್ಬರ ಹತ್ಯೆ

Prasthutha|

ಪಾಟ್ನಾ: ಪರೀಕ್ಷಾ ಕೊಠಡಿಯಲ್ಲಿ ಎಸೆದ ನಕಲು ಚೀಟಿಯನ್ನು ಪ್ರೇಮ ಪತ್ರ ಎಂದು ತಪ್ಪಾಗಿ ಗ್ರಹಿಸಿದ ಹುಡುಗಿ ತನ್ನ ಸಹೋದರರಲ್ಲಿ ದೂರಿದ ಹಿನ್ನೆಲೆ ಆಕೆಯ ಸಹೋದರರು ಸೇರಿದಂತೆ ಹುಡುಗರ ಗುಂಪೊಂದು 12 ವರ್ಷದ ಬಾಲಕನನ್ನು ಕೊಚ್ಚಿ ಕೊಂದಿರುವ ಆಘಾತಕಾರಿ ಘಟನೆ ಬಿಹಾರದ ಭೋಜಪುರ್ ಎಂಬಲ್ಲಿ ನಡೆದಿದೆ.

- Advertisement -

ಮಹತ್ಬಾನಿಯಾ ಹಾಲ್ಟ್ ನಿಲ್ದಾಣದ ಬಳಿ ರೈಲ್ವೆ ಹಳಿಯ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಾಲಕನ ಮೃತ ದೇಹದ ಭಾಗಗಳು ಪತ್ತೆಯಾಗಿದ್ದು, ಪೊಲೀಸರು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಕಳೆದ  ವಾರ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಆರನೇ ತರಗತಿಯಲ್ಲಿ ಕಲಿಯುತ್ತಿರುವ ತನ್ನ ಸಹೋದರಿಗೆ ಸಹಾಯ ಮಾಡಲೆಂದು ಕೇಂದ್ರದ ಹೊರಗಿನಿಂದ ಐದನೇ ತರಗತಿಯ ಬಾಲಕನೊಬ್ಬ ಉತ್ತರದ ಚೀಟಿಯೊಂದನ್ನು ಒಳಗೆ ಎಸೆದಿದ್ದ. ಆದರೆ ಈ ಚೀಟಿ ಇನ್ನೊಬ್ಬ ಬಾಲಕಿಯ ಹತ್ತಿರ ಬಿದ್ದಿತ್ತು. ಇದು ಪ್ರೇಮಪತ್ರ ಎಂದು ತಪ್ಪಾಗಿ ತಿಳಿದ ಆಕೆ ಮನೆಗೆ ಮರಳಿದ ನಂತರ ತನ್ನ ಸಹೋದರರಿಗೆ ತಿಳಿಸಿದ್ದಳು. ಆಕೆಯ ಸಹೋದರರು ಮತ್ತು ಅವರ ಸ್ನೇಹಿತರು ಜೊತೆಗೂಡಿ ಚೀಟಿ ಎಸೆದಿದ್ದ ಬಾಲಕನಿಗೆ ಥಳಿಸಿ ಕೊಂದಿದ್ದಾರೆ.

- Advertisement -

ಘಟನೆ ಸಂಬಂಧ ಬಾಲಕಿಯ ಸಹೋದರ ಹಾಗೂ ಆತನ ಸ್ನೇಹಿತರನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ. ಅಲ್ಲದೆ ಆರೋಪಿಗಳೆಲ್ಲರೂ ಅಪ್ರಾಪ್ತರಾಗಿರುವುದರಿಂದ ಅವರನ್ನು ಬಾಲಾಪರಾಧಿಗಳ ಕೇಂದ್ರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.



Join Whatsapp