ಚಿಕ್ಕಮಗಳೂರು: ತಾಲೂಕಿನ ಗಿರಿ ಶ್ರೇಣಿ ಭಾಗದಲ್ಲಿ ‘ನೀಲಿ ಕುರಿಂಜಿ’ ಹೂವುಗಳು ಅರಳಿ ನಿಂತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಪಶ್ಚಿಮ ಘಟ್ಟಗಳ ಗಿರಿಗಳಲ್ಲಿ 12 ವರ್ಷಗಳಿಗೊಮ್ಮೆ ಏಕಕಾಲದಲ್ಲಿ ಅರಳುವುದು ಈ ಹೂವಿನ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಈ ಪುಷ್ಪವು ಹವಾಮಾನ ವೈಪರೀತ್ಯದಿಂದಾಗಿ ಅವಧಿ ವ್ಯತ್ಯಯವಾಗಿ ಅರಳುತ್ತಿದೆ.
ಪಶ್ಚಿಮ ಘಟ್ಟಗಳ ನಿಗೂಢಗಳಲ್ಲಿ ಒಂದಾದ ‘ಸ್ಟ್ರೋಬಿಲಾಂಥಿಸ್’ ಪ್ರಭೇದ ಈ ಅಪರೂಪದ ಪುಷ್ಪ ವೈಭವ ಕಂಡು ಪ್ರವಾಸಿಗರಿಗೆ ಖುಷಿ ನೀಡಿದೆ. ಗಿರಿ ಶ್ರೇಣಿಯ ಮಹಲ್ ಪ್ರದೇಶದ ಒಂದು ಭಾಗ ಈಗ ನೀಲಾಂಬರ ಭೂಷಿತವಾಗಿದೆ.
ನೀಲಿ ಕುರಿಂಜಿ ಅರಳಿ ನಿಂತ ಅವಧಿಯಲ್ಲಿ ಪಶ್ಚಿಮ ಘಟ್ಟದ ಶಿಖರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅನೇಕ ಕಡೆಗಳಿಂದ ಈ ರಮಣೀಯ ದೃಶ್ಯ ಕಾಣಲೆಂದೇ ಜನರು ಭೇಟಿ ನೀಡುತ್ತಾರೆ.