ಬಿಜೆಪಿಯು ‘ದಿ ಕಾಶ್ಮೀರ್ ಫೈಲ್ಸ್’ ಮೂಲಕ ದ್ವೇಷ ಹರಡುತ್ತಿದೆ: ಶರದ್ ಪವಾರ್

Prasthutha|

ನವದೆಹಲಿ: ಬಿಜೆಪಿಯು ‘ದಿ ಕಾಶ್ಮೀರ್ ಫೈಲ್ಸ್ ‘ ಸಿನಿಮಾ ಮೂಲಕ ಕಣಿವೆ ಪ್ರದೇಶದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿ ಅಪ ಪ್ರಚಾರ ಹರಡುವುದರೊಂದಿಗೆ ದೇಶಾದ್ಯಂತ ದ್ವೇಷ ಹರಡುತ್ತಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

- Advertisement -

ಎನ್ ಸಿಪಿ ದೆಹಲಿ ಅಲ್ಪಸಂಖ್ಯಾತ ವಿಭಾಗದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್ , ಇಂತಹ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಬಾರದಿತ್ತು. ಆದರೆ, ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ದೇಶದ ಏಕತೆ ಕಾಪಾಡಲು ಜವಾಬ್ದಾರರಾಗಬೇಕಾದವರು ಈ ಸಿನಿಮಾ ವೀಕ್ಷಿಸುವಂತೆ ಪ್ರೋತ್ಸಾಹಿಸುವ ಮೂಲಕ ಜನರಲ್ಲಿ ಆಕ್ರೋಶ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು. 



Join Whatsapp