ಬೆಂಗಳೂರನ್ನು ವಿಭಜಿಸುವ ವಿಧೇಯಕ ಇಂದು ವಿಧಾನಸಭೆಯಲ್ಲಿ ಮಂಡನೆ

Prasthutha|

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನ್ನು ಐದು ಜಿಲ್ಲೆಗಳಾಗಿ ವಿಭಜಿಸುವ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇಂದು ವಿಧಾನ ಸಭೆಯಲ್ಲಿ ಮಂಡನಡಯಾಗಲಿದೆ.

- Advertisement -

ಬೆಂಗಳೂರನ್ನು 5 ವಿಭಾಗಗಳಾಗಿ ವಿಭಜಿಸುವ ವಿಧೇಯಕ ಇದಾಗಿದೆ. ಬೆಂಗಳೂರನ್ನು ವಿಭಜಿಸಿ, ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡುವ ಸಲಹೆಗೆ ಅನುಮೋದನೆ ನೀಡಲಾಗಿದೆ.
ಈ ಕರಡು ಮಸೂದೆಯಲ್ಲಿ ಸುಮಾರು 400 ವಾರ್ಡ್ ಗಳ ರಚನೆಗೆ ಪ್ರಸ್ತಾಪ ಮಾಡಲಾಗಿದೆ. ಈ ಕರಡು ಮಸೂದೆಯಂತೆ ಬಿಡಿಎ ಅದರ ಯೋಜನೆ ರೂಪಿಸುವ ಅಧಿಕಾರ ಕಳೆದುಕೊಳ್ಳಲಿದೆ. ಆದರೆ ಬೃಹತ್ ಮೂಲಸೌಕರ್ಯ ಯೋಜನೆಗಳ ಕಾಮಗಾರಿಯನ್ನ ಬಿಡಿಎ ಕೈಗೊಳ್ಳಲಿದೆ.

ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ. 5-10 ಕಾರ್ಪೋರೇಷನ್ ಇರಲಿದೆ. ಒಂದೊಂದು ಕಾರ್ಪೋರೇಷನ್ ಗೆ ಒಬ್ಬ ಆಯುಕ್ತ ಇರಲಿದ್ದಾರೆ. ಜಲಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿದೆ. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಕೇಂದ್ರ ಸೇರಿದಂತೆ ಇನ್ನಷ್ಟು ಬಿಬಿಎಂಪಿ ಆಗಿ ವಿಂಗಡಣೆ ಮಾಡಲಾಗುತ್ತದೆ.

- Advertisement -

ಗ್ರೇಟರ್ ಬೆಂಗಳೂರು ವ್ಯಾಪ್ತಿ ಎಲ್ಲಿಯವರೆಗೆ?: ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ರಾಮನಗರ, ಕನಕಪುರ, ಆನೆಕಲ್, ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಬರಲಿದ.ೆ ದಿ ಗ್ರೇಟರ್ ಬೆಂಗಳೂರು ಗೌವರ್ನೆನ್ಸ್ ಬಿಲ್ – 2024 ಗೆ ಕ್ಯಾಬಿನೆಟ್ ಅನುಮೋದನೆ ಸಿಕ್ಕಿದ್ದಯ, ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ವಿವಿಧ ಹಂತದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗುತ್ತದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ಸಿಟಿ ಕಾರ್ಪೊರೇಷನ್ ಗಳು ಬರಲಿದೆ.



Join Whatsapp