ಕೊಟ್ಟಿಗೆಹಾರ; ಸಂಭ್ರಮದ ಗೌರಿ ಹಬ್ಬ ಆಚರಣೆ

Prasthutha|

 ಚಿಕ್ಕಮಗಳೂರು: ಬಣಕಲ್,ಬಾಳೂರು,ಕೊಟ್ಟಿಗೆಹಾರ ಸುತ್ತಮುತ್ತ ಮಹಿಳೆಯರು,ಮಕ್ಕಳು ವಿಶೇಷ ಗಂಗೆ ಪೂಜೆ ನಡೆಸಿ ಬಾಗಿನ ನೀಡಿ ಗೌರಿಹಬ್ಬ ಆಚರಿಸಿದರು.

- Advertisement -

ಪೂಜೆಯಲ್ಲಿ ಗ್ರಾಮದ ಗೃಹಿಣಿ ಸ್ವಾತಿನವೀನ್  ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ ‘ಹಿಂದು ಸಂಪ್ರದಾಯದಲ್ಲಿ ಅದರಲ್ಲೂ ಮಲೆನಾಡಿನ ಭಾಗದಲ್ಲಿ ಗೌರಿ ಹಬ್ಬದ ಸಂಭ್ರಮ ಅದ್ದೂರಿಯಾಗಿ ಆಚರಿಸಲಾಗುತ್ತದೆ.ಈ ಹಬ್ಬ ಮಹಿಳೆಯರ ಪಾಲಿಗೆ ಶ್ರೇಷ್ಠ ಹಬ್ಬವಾಗಿದೆ.ರಂಗೋಲಿಯ ಚಿತ್ತಾರ, ಸುಮಂಗಲಿಯರಿಗೆ   ಹದಿನಾರು ಸುತ್ತಿನ ಗೌರಿ ದಾರ ಪೂಜಿಸಿ ಕೈಗೆ ಕಟ್ಟಿಕೊಳ್ಳುತ್ತಾರೆ.ಗೌರಿ ಹಬ್ಬದಂದು ಸುಮಂಗಲಿಯರಿಗೆ ನೀಡುವ ಬಾಗಿನ ಅತಿ ಶ್ರೇಷ್ಠವಾದುದು.ಅದಕ್ಕೆಂದೇ ಐದು ಮುತ್ತೈದೆಯರಿಗೆ ಈ ದಿನ ಬಾಗಿನ ನೀಡುವ ಸಂಪ್ರದಾಯವಿದೆ.ಅರಿಶಿಣ ಕುಂಕುಮ,ಹಸಿರುಬಳೆ,ಕರಿಮಣಿ ಬಾರಿಗೆ,ಸೀರೆ ಅಥವಾ ಬ್ಲೌಸ್ ಪೀಸ್,ಕಾಯಿ ಹಣ್ಣು ದಾನ್ಯಗಳನ್ನೊಳಗೊಂಡ ಬಾಗಿನ ನೀಡುವುದರಿಂದ ದಾನ ಮಾಡುವ ಪುಣ್ಯ ಲಭಿಸುತ್ತದೆ’ಎಂದರು.

ಈ ಸಂದರ್ಭದಲ್ಲಿ ಯಶೋದಮ್ಮ,ಸುಶೀಲಮ್ಮ, ಸೌಮ್ಯ,ಸುಧಾ,ಜಯಂತಿ,ಶ್ವೇತಾ,ಕುಸುಮ ಮತ್ತಿತರರು ಇದ್ದರು.



Join Whatsapp