ಉಕ್ರೇನ್ ಮೇಲಿನ ಯುದ್ಧ ಹಿನ್ನೆಲೆ; ರಷ್ಯಾದಲ್ಲಿ ಉದ್ಯಮ ಕೈಬಿಟ್ಟ ಇನ್ಫೋಸಿಸ್

Prasthutha|

ಬೆಂಗಳೂರು: ರಷ್ಯಾದಲ್ಲಿ 100ರಷ್ಟು ಉದ್ಯೋಗಿಗಳನ್ನು ಹೊಂದಿರುವ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯು, ರಷ್ಯಾದಲ್ಲಿ ವ್ಯಾಪಾರ-ವಹಿವಾಟು ಉದ್ಯಮದಿಂದ ಹೊರಬರುವುದಾಗಿ ತಿಳಿಸಿದೆ.

- Advertisement -

ಇನ್ಫೋಸಿಸ್ ಕಂಪೆನಿಯು ರಷ್ಯಾ-ಉಕ್ರೇನ್ ಸಂಘರ್ಷ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಭವಿಷ್ಯದಲ್ಲಿ ರಷ್ಯಾದಲ್ಲಿ ಕೆಲಸ ಮಾಡುವ ಯಾವುದೇ ಯೋಜನೆಯಿಲ್ಲ ಎಂದು ಹೇಳಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಇಒ ಸಲೀಲ್ ಪರೇಖ್ “ಇನ್ಫೋಸಿಸ್ ಒಂದು ಕಂಪನಿ ಎಂಬ ನಿಟ್ಟಿನಲ್ಲಿ ರಷ್ಯಾ ಮತ್ತು ಉಕ್ರೇನ್ ಜೊತೆಯಾಗಿ ಶಾಂತಿ ಒಪ್ಪಂದ ನಡೆಸುವುದನ್ನು ಬಯಸುತ್ತದೆ. ರಷ್ಯಾದಲ್ಲಿ ನಮ್ಮ ಎಲ್ಲಾ ಕೆಲಸಗಳನ್ನು ರಷ್ಯಾದ ಹೊರಗಿನ ಕೇಂದ್ರಗಳಿಗೆ ಬದಲಾಯಿಸಲು ಪ್ರಾರಂಭಿಸಿದ್ದೇವೆ. ಅಮೆರಿಕ, ಇಂಗ್ಲೆಂಡ್, ಯುರೋಪ್ ಉದ್ಯಮಕ್ಕೆ ದೊಡ್ಡ ಮಾರುಕಟ್ಟೆಯಾಗಿದ್ದು ಪೂರ್ವ ಯುರೋಪ್ ನಲ್ಲಿ ವಿಸ್ತರಿಸಿಕೊಳ್ಳುತ್ತಿದ್ದೇವೆ. ರಷ್ಯಾ ಹೊರತಾಗಿ ಇನ್ಫೋಸಿಸ್ ಹಂಗೇರಿ, ಲಿಥುನಿಯಾ ಮತ್ತು ಸ್ಲೊವಾಕಿಯಾಗಳಲ್ಲಿ ಕೂಡ ವಹಿವಾಟು ಹೊಂದಿದೆ. ಉಕ್ರೇನ್ ನಿಂದ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಉದ್ಯೋಗ ನೀಡಲು ಸಹಾಯ ಮಾಡಲಿದೆ ಎಂದು ಹೇಳಿದರು.

- Advertisement -

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮತ್ತು ಅವರ ಪತಿ ರಿಷಿ ಸುನಕ್ ಅವರು ಇಂಗ್ಲೆಂಡಿನಲ್ಲಿ ತೆರಿಗೆ ಪಾವತಿ ಬಗ್ಗೆಎದುರಿಸುತ್ತಿರುವ ತೊಂದರೆಗಳ ಬಗ್ಗೆ ಕೇಳಿದಾಗ, ವೈಯಕ್ತಿಕ ಷೇರುದಾರರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಪರೇಖ್  ಎಂದು ಹೇಳಿದರು.

Join Whatsapp