ಪಿಲಾರು ಕಾನದಲ್ಲಿ ಕಾಡುಕೋಣಗಳ ದಾಳಿ; ಬೆಳೆ ಕಳೆದುಕೊಂಡ ರೈತರು

Prasthutha|

ಮಂಗಳೂರು: ಪಿಲಾರು ಕಾನದ ಮಜಲಬೆಟ್ಟು, ಮಿತ್ತಬೆಟ್ಟು, ಕುದ್ರುಬೆಟ್ಟು, ಗುಂಡುಪಾರೆ, ಸೂಡ ಪರಿಸರದಲ್ಲಿ ಏಳೆಂಟು ಕಾಡುಕೋಣಗಳ ಗುಂಪು ಕೃಷಿಕರ ತೋಟ ಗದ್ದೆಗಳಿಗೆ ದಾಳಿ ಮಾಡಿ ಬೆಳೆಗಳನ್ನು ತಿಂದು ಹಾಕಿವೆ. ಇಲ್ಲಿನ ಜನರು ಓಡಾಡಲು ಹೆದರುವಂತಾಗಿದೆ.

- Advertisement -

ಕೂಡಲೇ ಕಾಡುಕೋಣಗಳನ್ನು ಓಡಿಸಿ ಸ್ಥಳೀಯ ನಿವಾಸಿಗಳ ಆತಂಕ ನಿವಾರಿಸುವಂತೆ ಪಿಲಾರು ಮಿತ್ತಬೆಟ್ಟು ಕೃಷಿಕ ಅರುಣ್ ಡಿಸೋಜಾ ಮತ್ತು ಮಹಾಲಿಂಗೇಶ್ವರ ದೇವಸ್ಥಾನ ಸಮಿತಿಯ ವಾದಿರಾಜ ಉಡುಪ ಅವರು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೂ ಕಾಡುಕೋಣಗಳು ಸಿಕ್ಕಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಪಾಲಕರು ಹೇಳುವ ಮಟ್ಟಕ್ಕೆ ಕಾಡುಕೋಣಗಳ ಉಪಟಳ ಹೆಚ್ಚಾಗಿವೆ. 

- Advertisement -

ಮೊನ್ನೆ ಮೂರು ಭಾರೀ ಗಾತ್ರದ ಕಾಡುಕೋಣಗಳು ಊರಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ ಕಾಣಿಸಿಕೊಂಡ ಮೇಲೆ ಜನರು ದೇವಾಲಯದತ್ತ ಹೋಗುವುದನ್ನು ನಿಲ್ಲಿಸಿರುವುದಾಗಿ ವರದಿಯಾಗಿದೆ.

ಬಯಲಿನಲ್ಲಿ ಮೂರು ಕಾಡುಕೋಣಗಳು ನಾಲ್ಕು ಕರು ಕಡಸುಗಳ ಜೊತೆಗೆ ಬಂದು ಹೊಸ ಮೇವು ಬಯಲನ್ನು ಗುರುತಿಸಿಕೊಂಡು ಹೋಗಿವೆ.

ಜನರು ಕಾಡಿನ ಒತ್ತುವರಿ ಮಾಡಿದರೆ ಅವಾದರೂ ಎಲ್ಲಿಗೆ ಹೋಗಬೇಕು ಎಂದು ಕೆಲವು ಉದಾರವಾದಿಗಳು ಮಾತನಾಡುತ್ತಿರುವುದು ಕಂಡುಬಂತು.

Join Whatsapp