ಹುಲಿ ಹಿಡಿಯಲು ಬಂದ ಅಧಿಕಾರಿಗಳ ದರ್ಪ: ಗ್ರಾಮಸ್ಥರ ಆಕ್ರೋಶ

Prasthutha|

ಮಡಿಕೇರಿ: ದಕ್ಷಿಣ ಕೊಡಗಿನ ಕಂಡಂಗಾಲದಲ್ಲಿ ಕೊಂಬಿಂಗ್ ಮಾಡಿ ಹುಲಿಯನ್ನು ಹಿಡಿಯಲು ನೇಮಿಸಿರುವ ಅಧಿಕಾರಿಗಳ ದರ್ಪದ ಮಾತುಗಳಿಗೆ ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

- Advertisement -


ಗ್ರಾಮಸ್ಥರು ಹುಲಿಯ ಸುಳಿವಿನ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಹೋದ ವೇಳೆ ಘಟನೆ ನಡೆದಿದೆ. ಈ ರೀತಿಯ ಅರಣ್ಯ ಅಧಿಕಾರಿಗಳು ಇದ್ದರೆ ಹುಲಿಯನ್ನು ಅಲ್ಲ ಇಲಿಯನ್ನು ಹಿಡಿಯಲು ಆಗುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ
ಯಾವ ಕಾಟಾಚಾರಕ್ಕೆ ಇವರು ಕೊಂಮಿಂಗ್ ಎನ್ನುವ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಸರಕಾರದ ಹಣವನ್ನು ಕಬಳಿಸಲು ಇವರು ಬಂದಿದ್ದು, ಇವರಿಗೆ ಯಾವುದೇ ಜವಾಬ್ದಾರಿಯಿಲ್ಲ. ಹುಲಿಯನ್ನು ಸೆರೆ ಹಿಡಿದೇ ಹಿಡಿಯುತ್ತೇವೆ ಎಂದು ಭರವಸೆ ಕೊಡುತ್ತಾ ಮೋಜು-ಮಸ್ತಿಯಲ್ಲಿ ಅಧಿಕಾರಿಗಳ ವರ್ಗ ತೊಡಗಿದ್ದಾರೆ. ಹುಲಿಯ ಬಾಯಿಗೆ ಇನ್ನೆಷ್ಟು ಜೀವಗಳನ್ನು ಬಲಿ ಕೊಡಲು ಕಾದು ನೋಡುತ್ತಿದ್ದಾರೆ ಎಂದು ಅಧಿಕಾರಿಗಳ ಆಕ್ರೋಶ ವ್ಯಕ್ತ ಪಡಿಸಿದರು.



Join Whatsapp