ಪ್ರವಾದಿ ನಿಂದಕನ ಬಂಧನ; ಶಾಂತಗೊಂಡ ತೆಲಂಗಾಣ

Prasthutha|

ಹೈದರಾಬಾದ್: ಪ್ರವಾದಿ ಕುರಿತ ವಿವಾದಕ್ಕೆ ಸಂಬಂಧಿಸಿ  ಅಶಾಂತಿ ನಿರ್ಮಾಣವಾಗಿದ್ದ ಹೈದರಾಬಾದ್ ನಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಶಾಂತಿಯುತವಾಗಿ ನಿರ್ವಹಿಸಲು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ನಾಗರಿಕರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ  ಇಲ್ಲಿನ ಓಲ್ಡ್ ಸಿಟಿ ಪ್ರದೇಶದ ಹೆಚ್ಚಿನ ಭಾಗಗಳು ಶುಕ್ರವಾರ ಶಾಂತವಾಗಿವೆ.

- Advertisement -

ಹೈದರಾಬಾದ್ ನ ಮಸೀದಿ ಮತ್ತು ಭಾಗ್ಯಲಕ್ಷ್ಮಿ ದೇವಾಲಯ ಪ್ರದೇಶಗಳು ಶಾಂತಿಯುತವಾಗಿದ್ದು,ಪ್ರತಿಭಟನೆಯಿಂದಾಗಿ ಮುಚ್ಚಲ್ಪಟ್ಟ  ಎಲ್ಲಾ ಅಂಗಡಿ ಮುಂಗಟ್ಟುಗಳು  ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ.

ಟಿ ರಾಜಾ ಸಿಂಗ್ ನನ್ನು ಬಂಧಿಸುವ ಮೂಲಕ  ತಮ್ಮ ಅತಿದೊಡ್ಡ ಬೇಡಿಕೆ ಈಡೇರಿದೆ. ಶುಕ್ರವಾರದ ಪ್ರಾರ್ಥನೆಯ ನಂತರ ಅಂತಹ ಯಾವುದೇ ಘೋಷಣೆಗಳನ್ನು ಕೂಗಬೇಡಿ ಎಂದು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ, ಇದು ದೇಶದ ಸಾಮರಸ್ಯಕ್ಕೆ ಧಕ್ಕೆ ತರಬಹುದು. ಶಾಂತಿ ನೆಲೆಸಲಿ ಎಂದು ಉವೈಸಿ ಹೈದರಾಬಾದ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

- Advertisement -

ಅಮಾನತುಗೊಂಡ ಬಿಜೆಪಿ ನಾಯಕ ಪ್ರವಾದಿ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ನಂತರ ತೆಲಂಗಾಣದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಸಿಂಗ್ ನನ್ನು ಮುಂಜಾಗ್ರತಾ ಬಂಧನ ಕಾಯ್ದೆ (ಪಿಡಿ ಕಾಯ್ದೆ) ಅಡಿಯಲ್ಲಿ ಮತ್ತೆ ಬಂಧಿಸಲಾಗಿದೆ.



Join Whatsapp